ಕಾಸರಗೋಡು: ಕೇರಳದ ಪ್ರವಾಸೋದ್ಯಮ ಕ್ಷೇತ್ರದ ಬ್ರಾಂಡ್ ಮೌಲ್ಯವನ್ನು ಕಾಯ್ದುಕೊಂಡು ಬರುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಅವರು 8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೀಲೇಶ್ವರಂ ಕೊಟ್ಟಪುರಂ ಹೌಸ್ ಬೋಟ್ ಟರ್ಮಿನಲ್ ಉದ್ಘಾಟಿಸಿ ಮಾತನಾಡಿದರು.
ಹೌಸ್‍ಬೋಟ್‍ನಿಂದ ಹೊರಹರಿಯುವ ತ್ಯಜ್ಯ ಹಾಗೂ ಮಾಲಿನ್ಯ ಜಲಾಶಯಕ್ಕೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟಿ, ಸಂಸ್ಕರಣಾ ಘಟಕದಲ್ಲಿ ಶುದ್ಧೀಕರಿಸಬೇಕು. ಜಲಾಶಯಗಳನ್ನು ಶುಚಿಯಾಗಿರಿಸಲು ಗರಿಷ್ಠ ಪ್ರಯತ್ನ ನಡೆಸಬೇಕು. ಉದ್ಯೋಗವಿಲ್ಲದ ಯುವಕರು ಪ್ರವಾಸೋದ್ಯಮ ತಾಣಗಳಿಂದ ಉದ್ಯೋಗಾವಕಾಶದ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು. ಬೋಟ್‍ಹೌಸ್ ಮೂಲಕ ಖಾಸಗಿ ಸಹಭಾಗಿತ್ವದೊಂದಿಗೆ ಕೈಗೆಟುಕುವ ದರದಲ್ಲಿ ವಸತಿ ಒದಗಿಸಲು ಸಾಧ್ಯವಾಗಬೇಕು ಎಂದು ತಿಳಿಸಿದರು. ಉತ್ತರ ಕೇರಳದಲ್ಲಿ ಬೃಹತ್ ಪ್ರವಾಸೋದ್ಯಮ ಸಾಮಥ್ರ್ಯವಿದ್ದು, ನೀಲೇಶ್ವರ ಕೊಟ್ಟಾಪುರಂ ಹೌಸ್ ಬೋಟ್ ಟರ್ಮಿನಲ್ ಉತ್ತರ ಕೇರಳ ಮತ್ತು ನಿರ್ದಿಷ್ಟ ಪ್ರದೇಶದ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮೈಲಿಗಲ್ಲಾಗಲಿದೆ. ಈ ಶಿಪ್ಪಿಂಗ್ ಟರ್ಮಿನಲ್‍ಗೆ ತೆರಳುವ ರಸ್ತೆ ಮತ್ತು ಅದಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯವಿರುವ ಭೂಮಿಯನ್ನು ಸ್ಥಳೀಯ ನಿವಾಸಿಗಳು ಒದಗಿಸಿಕೊಟ್ಟಿದ್ದು, ಇದು ನೀಲೇಶ್ವರ-ಬೇಕಲ ನಡುವಿನ ಪ್ರಸ್ತಾವಿತ ಜಲಮಾರ್ಗದ ಆರಂಭಕ್ಕೆ ಬುನಾದಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಎಂ. ರಾಜಗೋಪಾಲ ಅಧ್ಯಕ್ಷತೆ ವಹಿಸಿದ್ದರು. ಒಳನಾಡು ಜಲಸಾರಿಗೆ ಇಲಾಖೆಯ ನಿರ್ದೇಶಕ ಅರುಣ್ ಕೆ ಜೇಕಬ್ ವರದಿ ಮಂಡಿಸಿದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಭಾರತೀಯ ನೇವಲ್ ಅಕಾಡೆಮಿ ವೈಸ್ ಅಡ್ಮಿರಲ್ ಪಿ.ಕೆ.ಬಾಲ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್, ಮಾಜಿ ಸಂಸದ ಪಿ. ಕರುಣಾಕರನ್, ಮಾಜಿ ಶಾಸಕ ಕೆ.ಪಿ.ಸತೀಶ್ ಚಂದ್ರನ್, ನೀಲೇಶ್ವರ ನಗರಸಭೆ ಉಪಾಧ್ಯಕ್ಷ ಪಿ.ಪಿ.ಮಹಮ್ಮದ್ ರಫಿ ಮುಂತಾದವರು ಉಪಸ್ಥಿತರಿದ್ದರು.
ಕೇರಳ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹೌಸ್ ಬೋಟ್ ಟರ್ಮಿನಲ್ ಮೈಲಿಗಲ್ಲು: ಮುಖ್ಯಮಂತ್ರಿ ಪಿಣರಾಯಿ ವಿಜಯನ್
0
ಫೆಬ್ರವರಿ 21, 2023
Tags