ಕಾಸರಗೋಡು: ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಶುಶ್ರೂಷಕರಿಗೆ ಖಾದಿ ಓವರ್ ಕೋಟ್ ವಿತರಣೆ ಮತ್ತು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಸಿಬ್ಬಂದಿಗೆ ಖಾದಿ ಬಟ್ಟೆ ವಿತರಣೆಯನ್ನು ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಉಪಾಧ್ಯಕ್ಷ ಪಿ.ಜಯರಾಜನ್ ಉದ್ಘಾಟಿಸಿದರು.
ಕಾಞಂಗಾಡ್ ಜಿಲ್ಲಾ ವೈದ್ಯಕೀಯ ಕಛೇರಿ (ಆರೋಗ್ಯ) ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ವಹಿಸಿದ್ದರು. ಶುಶ್ರೂಷಕರಿಗೆ ಖಾದಿ ಓವರ್ ಕೋಟ್ ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮತ್ತು ನೌಕರರಿಗೆ ಖಾದಿ ಉಡುಗೆಯನ್ನು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಸಿಬ್ಬಂದಿ ಕಾರ್ಯದರ್ಶಿ ಎಂ.ರಾಧಾಕೃಷ್ಣನ್ ಅವರು ಸ್ವೀಕರಿಸಿದರು. ಕೇರಳ ಖಾದಿ ಗ್ರಾಮೋದ್ಯೋಗ ಮಂಡಳಿ ಮತ್ತು ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಜಂಟಿ ನಿರ್ದೇಶನದಲ್ಲಿ ವೈದ್ಯರು, ದಾದಿಯರು ಮತ್ತು ವೈದ್ಯಾಧಿಕಾರಿಗಳು ಖಾದಿ ಮೇಲುಡುಪುಗಳನ್ನು ಧರಿಸಬೇಕು ಎಂಬ ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದ ಪರಿಣಾಮಕಾರಿ ಅನುμÁ್ಠನದ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೌಕರರು ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸಬೇಕು ಎಂದು ಸರ್ಕಾರದ ಆದೇಶ. ಇದರ ಅಂಗವಾಗಿ ಜಿಲ್ಲೆಯ ಇತರೆ ಸರ್ಕಾರಿ ಆರೋಗ್ಯ ಸಂಸ್ಥೆಗಳ ನೌಕರರಿಗೂ ಖಾದಿ ಧರಿಸಲು ಉತ್ತೇಜನ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್ ಮಾಹಿತಿ ನೀಡಿದರು.
ಡಾ.ಚಂದ್ರ ಮೋಹನನ್, ಅಬ್ದುಲ್ ಲತೀಫ್ ಮಟತ್ತಿಲ್, ಎನ್.ಮೇರಿಕುಟ್ಟಿ, ಪಿ.ಕುಂಞÂಕೃಷ್ಣನ್ ನಾಯರ್ ಮಾತನಾಡಿದರು. ಪಯ್ಯನ್ನೂರು ಖಾದಿ ಕೇಂದ್ರದ ನಿರ್ದೇಶಕ ಕೆ.ವಿ.ರಾಜೇಶ್ ಸ್ವಾಗತಿಸಿ, ಯೋಜನಾಧಿಕಾರಿ ಎಂ.ಆಯಿμÁ ವಂದಿಸಿದರು.
ಜಿಲ್ಲಾ ಆಸ್ಪತ್ರೆಯ ದಾದಿಯರು ಇನ್ನು ಖಾದಿ ಕೋಟ್ ಧಿರಿಸಿನಲ್ಲಿ
0
ಫೆಬ್ರವರಿ 16, 2023