ಮುಳ್ಳೇರಿಯ: ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ದೃಢಕಲಶ ಬುಧವಾರ ಜರಗಿತು. ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಶ್ರೀಮಹಾದೇವನಿಗೆ ಕಲಶಾಭಿಷೇಕ ನೆರವೇರಿಸಿದರು. ಊರಪರವೂರ ಭಕ್ತಾದಿಗಳು ಈ ಸಂದಭರ್Àದಲ್ಲಿ ಪಾಲ್ಗೊಂಡು ಕೃತಾರ್ಥರಾದರು. ಶ್ರೀ ಧೂಮಾವತೀ ದೈವಕ್ಕೆ ತಂಬಿಲ, ಪರಶುರಾಮ ಸ್ವಾಮಿ, ಶಾಸ್ತಾರ, ಗಣಪತಿ, ಸುಬ್ರಹ್ಮಣ್ಯ, ಪಾರ್ವತೀ ದೇವರಿಗೂ ಕಲಶಾಭಿಷೇಕ ನಡೆಸಲಾಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. 2022 ಡಿಸೆಂಬರ್ 25ರಿಂದ ಜನವರಿ 5ರ ತನಕ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ಜರಗಿತ್ತು.
ಬಡಗುಶಬರಿಮಲೆ ಉಬ್ರಂಗಳದಲ್ಲಿ ದೃಢಕಲಶ ಸಂಪನ್ನ
0
ಫೆಬ್ರವರಿ 16, 2023
Tags