ಮುಳ್ಳೇರಿಯ: ಆರ್ಯ ಯಾನೆ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಯೋಜಿತ ಕಾರ್ಯಕ್ರಮಗಳಲ್ಲಿ ಪ್ರಮುಖ ಹಾಗು ಸಮಾಜ ಬಂಧುಗಳು ಹಲವಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯದಂತೆ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ, ಬಲಿವಾಡು ಕೂಟ, ಅನ್ನ ಸಂತರ್ಪಣೆ ಜರಗಿತು.
ಈ ಸಂದಭರ್Àದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಹಾಗು ಮೊಕ್ತೇಸರ ಆನೆಮಜಲು ವಿಷ್ಣು ಭಟ್ ಆಶೀರ್ವಚನ ನೀಡಿದರು ಹಾಗು ಸಮಾಜ ಸಂಘದ ವತಿಯಿಂದ ನಿವೇಶನ ಖರೀದಿಯ ಮಾಹಿತಿ ತಿಳಿದು 2 ಸಹಾಯಧನ ಅದೃಷ್ಟ ಚೀಟಿ ಖರೀದಿಸಿ ರೂ.4000 ದೇಣಿಗೆ ನೀಡಿದರು.
ಸಮಾಜ ಸಂಘದ ಗೌರವಾಧ್ಯಕ್ಷೆ ಪ್ರೇಮಲತಾ ವೈ ರಾವ್, ಅಧ್ಯಕ್ಷ ವಾಮನ ರಾವ್ ವಾಗ್ಮಾನ್, ಕಾರ್ಯದರ್ಶಿ ಪ್ರದೀಪ್ ಚಂದ್ರ ಜಾಧವ್, ಕೋಶಾಧಿಕಾರಿ ಮೋಹನ್ ರಾವ್ ಬೋಂಸ್ಲೆ, ಜತೆ ಕಾರ್ಯದರ್ಶಿ ಶಿಶುಪಾಲ್ ರಾವ್ ಬೋಂಸ್ಲೆ, ಕಾರ್ಯಕಾರಿ ಸಮಿತಿ ಸದಸ್ಯರಾದ ನೀಳೋಜಿ ರಾವ್ ಬೋಂಸ್ಲೆ, ಗಂಗಾಧರ್ ವಾಗ್ಮಾನ್, ಶ್ರೀಧರ್ ಪಾಟೀಲ್, ವಲಯ ಸಂಚಾಲಕ ಹರೀಶ್ ಪಾಟೀಲ್, ರಾಜೇಶ್ ಎಡನೀರು, ಪ್ರಮುಖರಾದ ಕೃಷ್ಣೋಜಿ ರಾವ್, ಸದಾನಂದ ಕಟವಾಟ್, ಪುರುಷೋತ್ತಮ್ ಬಹುಮಾನ್, ಗುಣಸಾಗರ್ ವಾಗ್ಮಾನ್, ಕೀರ್ತಿರಾಜ್ ಪಾಟೀಲ್, ದಯಾನಂದ ಪಾಟೀಲ್, ನರೇಂದ್ರ, ದಯಾನಂದ ಪಿಲಿಕುಂಜೆ, ಸತ್ಯರಾಜ್ ಅಂಬುಕುಂಜೆ, ಪುನಿತಾ ಗಿರಿರಾಜ್ ಭÀರೆಕ್ಕರ್, ಕವಿತಾ ಗಿರೀಶ್ ಬಹುಮಾನ್ ಸಹಿತ ಸಮಾಜ ಬಂಧುಗಳು ಉಪಸ್ಥಿತರಿದ್ದು ದೇವರ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದ ಸಂಚಾಲಕ ಶ್ರೀಧರ್ ರಾವ್ ಬಹುಮಾನ್ ವಂದಿಸಿದರು.
ಮಲ್ಲದಲ್ಲಿ ಸಾಮೂಹಿಕ ಪ್ರಾರ್ಥನೆ, ಬಲಿವಾಡು ಕೂಟ, ಅನ್ನ ಸಂತರ್ಪಣೆ
0
ಫೆಬ್ರವರಿ 17, 2023