HEALTH TIPS

ಹಸಿವಿಗಿಂತ ಸ್ವಾತಂತ್ರ್ಯ ದೊಡ್ಡದು


             ಹಸಿವಿಗಿಂತ ಸ್ವಾತಂತ್ರ್ಯ ದೊಡ್ಡದು ಎಂಬುದು ಮಹತ್ತರವಾದ ಹೇಳಿಕೆ.ನೀವೂ ಕೇಳಿರಬೇಕಲ್ಲ. ಹೌದು… ಕರ್ನಾಟಕದ ಕೊಂಬಾರು ವನ್ಯಜೀವಿ ಅಭಯಾರಣ್ಯದ ಬಳಿಯ ತಂಗುದಾಣದಲ್ಲಿ ಈ ಘಟನೆ ಗಮನ ಸೆಳೆದಿದೆ.
               ಚಿರತೆಯೊಂದು ನಾಯಿಯನ್ನು ಅಟ್ಟಿಸಿಕೊಂಡು ಬರುತ್ತಿತ್ತು. ನಾಯಿ ತನ್ನ ಪ್ರಾಣ ರಕ್ಷಣೆಗೆ ಕಿಟಕಿಯ ಮೂಲಕ ಶೌಚಾಲಯವನ್ನು ಪ್ರವೇಶಿಸಿತು. ನಾಯಿಯನ್ನು ಹಿಂಬಾಲಿಸಿದ ಚಿರತೆ ಕೂಡ ಕಿಟಕಿಯ ಮೂಲಕ ಶೌಚಾಲಯಕ್ಕೆ ನುಗ್ಗಿತು.
            ನಾಯಿ ಮತ್ತು ಚಿರತೆ ಶೌಚಾಲಯದಲ್ಲಿ ಸಿಲುಕಿಕೊಂಡಿತು. ಬೇತಾಳದಂತೆ ಬೆನ್ನಹಿಂದೆಯೇ ಬಂದ ಚಿರತೆಯ ನೋಡಿ ಹೆದರಿದ ನಾಯಿ ಒಂದು ಮೂಲೆಯಲ್ಲಿ ಶಾಂತವಾಗಿ ಕುಳಿತಿತು. ಅದಕ್ಕೆ ಬೊಗಳಲೂ ಸಹ ಧೈರ್ಯವಿದ್ದಿರಲಿಲ್ಲ.
             ಹಸಿದ ಹುಲಿ ನಾಯಿಯತ್ತ ಹಾರಿ ಆಹಾರವನ್ನಾಗಿ ಮಾಡಬಹುದಿತ್ತು. ಆದರೆ ಚಿರತೆ ಅಂತಹದೊಂದು ಪ್ರಯತ್ನದತ್ತ ಮನಸ್ಸೇ ಮಾಡಲಿಲ್ಲ. ಎರಡು ಪ್ರಾಣಿಗಳು ಸುಮಾರು ಹನ್ನೆರಡು ಗಂಟೆಗಳ ಕಾಲ ವಿವಿಧ ಮೂಲೆಗಳಲ್ಲಿ ಮೌನವಾಗಿ ಕುಳಿತಿದ್ದವು. ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಹುಲಿಗೆ ಅರಿವಳಿಕೆ  ನೀಡಿ ಹಿಡಿದು ನಾಯಿಯನ್ನು ಬಚಾವುಗೊಳಿಸಿದರು.
             ಈಗ ಪ್ರಶ್ನೆ ಏನೆಂದರೆ ಹಸಿದ ಚಿರತೆ ಹತ್ತಿರದಲ್ಲೇ ಇದ್ದ ನಾಯಿಯನ್ನು ಹಿಡಿದು ತಿನ್ನಲಿಲ್ಲ ಏಕೆ ???
              ಈ ಪ್ರಶ್ನೆಗೆ ವನ್ಯಜೀವಿ ಸಂಶೋಧಕರು ಪ್ರತಿಕ್ರಿಯಿಸಿದ್ದು ಹೀಗೆ.. ವನ್ಯಜೀವಿ ತನ್ನ ಸ್ವಾತಂತ್ರ್ಯದ ಬಗ್ಗೆ ತುಂಬಾ ಸೂಕ್ಷ್ಮವಾಗಿರುತ್ತದೆ. ತಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದು ಅದು ತಿಳಿದಾಗ, ಹೇಳಲಾಗದ ಆಳವಾದ ದುಃಖವು ಅವನ್ನು ಕಾಡುತ್ತದೆ. ಅದರೊಂದಿಗೆ ತಮ್ಮ ಹಸಿವು ಮತ್ತು ಬಾಯಾರಿಕೆಯನ್ನು ಸಂಪೂರ್ಣವಾಗಿ ಮರೆತುಬಿಡುತ್ತವೆ.  ಆಹಾರವನ್ನು ಹೊಟ್ಟೆಗೆ ತಳ್ಳುವ ಪ್ರೇರಣೆ ಕಳೆದುಹೋಗುತ್ತದೆ.
            ಮನುಷ್ಯರಾದ ನಮಗೆ….. ವಿವಿಧ ರೀತಿಯಲ್ಲಿ ಸ್ವಾತಂತ್ರ್ಯ ಬೇಕು...... ವಾಕ್, ಅಭಿವ್ಯಕ್ತಿ, ಧರ್ಮ ಮತ್ತು ನಂಬಿಕೆ, ಆಹಾರ, ಚಿಂತನೆ ಮತ್ತು ಕ್ರಿಯೆಯ ಸ್ವಾತಂತ್ರ್ಯ.... ಇತ್ಯಾದಿ

ಸ್ವಾತಂತ್ರ್ಯ ಮತ್ತು ಸಂತೋಷ ಪರಸ್ಪರ ಸಂಬಂಧ ಹೊಂದಿದೆ. ನಾವು ಬಯಸಿದಂತೆ ಯೋಚಿಸುವ, ವರ್ತಿಸುವ ಮತ್ತು ಬದುಕುವ ಸ್ವಾತಂತ್ರ್ಯ.
           ನಾವು ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಹೆಚ್ಚು ವಿಶಾಲವಾಗಿ ನೋಡಿದರೆ, ವಾಸ್ತವವೆಂದರೆ ಅದು ಉಗುರು ಮತ್ತು ಮಾಂಸದಂತೆಯೇ ಸಂತೋಷಕ್ಕೂ ನಿಕಟ ಸಂಬಂಧ ಹೊಂದಿದೆ. ಮತ್ತು ಸಂತೋಷದ ರಹಸ್ಯವೆಂದರೆ ಸ್ವಾತಂತ್ರ್ಯ.




Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries