HEALTH TIPS

ತಂದೆಗೆ ತನ್ನ ಯಕೃತ್ತಿನ ಭಾಗ ನೀಡಿದ ಬಾಲಕಿ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿ

 

              ತೃಶ್ಶೂರು: ಕೇರಳದ 17ರ ಹರೆಯದ ಬಾಲಕಿ ದೇವಾನಂದಾ ತನ್ನ ಯಕೃತ್ತಿನ ಭಾಗವನ್ನು ತನ್ನ ತಂದೆಗೆ ದಾನ ನೀಡುವ ಮೂಲಕ ಭಾರತದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

                  ಮಾನವ ಅಂಗ ಕಸಿ ಕಾಯ್ದೆ,1994 ಅಪ್ರಾಪ್ತ ವಯಸ್ಕರು ಅಂಗಾಂಗ ದಾನ ಮಾಡಲು ಅನುಮತಿಸುವುದಿಲ್ಲ,ಹೀಗಾಗಿ 12ನೇ ತರಗತಿಯ ವಿದ್ಯಾರ್ಥಿನಿ ದೇವಾನಂದಾ ವಿನಾಯಿತಿಯನ್ನು ಕೋರಿ ಕೇರಳ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಳು.

                  ನ್ಯಾಯಾಲಯದ ಸಮ್ಮತಿಯ ಮೇರೆಗೆ ದೇವಾನಂದಾ ದೀರ್ಘಕಾಲಿಕ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ತನ್ನ ತಂದೆ ಪ್ರತೀಶರ ಜೀವವನ್ನು ಉಳಿಸಿಕೊಳ್ಳಲು ಫೆ.19ರಂದು ಅವರಿಗೆ ತನ್ನ ಯಕೃತ್ತಿನ ಭಾಗವನ್ನು ದಾನ ಮಾಡಿದ್ದಾಳೆ. 48ರ ಹರೆಯದ ಪ್ರತೀಶ ತೃಶ್ಶೂರಿನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.
ದಾನ ಮಾಡಲು ತನ್ನ ಯಕೃತ್ತು ಅತ್ಯುತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ತನ್ನ ಆಹಾರ ಕ್ರಮದಲ್ಲಿ ತೀವ್ರ ಬದಲಾವಣೆ ಮಾಡಿಕೊಂಡಿದ್ದ ದೇವಾನಂದಾ ಸ್ಥಳೀಯ ಜಿಮ್ಗೂ ಸೇರಿದ್ದಳು.

                      ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಅಲುವಾದ ರಾಜಗಿರಿ ಆಸ್ಪತ್ರೆಯಲ್ಲಿ ನಡೆದಿದೆ. ತಂದೆಯನ್ನು ಉಳಿಸಿಕೊಳ್ಳಲು ದೇವಾನಂದಾಳ ಪ್ರಯತ್ನಗಳನ್ನು ಮೆಚ್ಚಿದ ಆಸ್ಪತ್ರೆಯು ಶಸ್ತ್ರಚಿಕಿತ್ಸೆಯ ಶುಲ್ಕಗಳನ್ನು ಮನ್ನಾ ಮಾಡಿದೆ.

             ಒಂದು ವಾರದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡಿರುವ ದೇವಾನಂದಾ,ತನಗೆ ಹೆಮ್ಮೆಯಿದೆ,ಸಂತಸವಾಗಿದೆ ಮತ್ತು ನಿರಾಳವಾಗಿದ್ದೇನೆ ಎಂದು ಹೇಳಿದಳು. ನೆಮ್ಮದಿಯ ಜೀವನ ನಡೆಸುತ್ತಿದ್ದ ಪ್ರತೀಶರಿಗೆ ತನಗೆ ಯಕೃತ್ತಿನ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾದಾಗ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದಂತಾಗಿತ್ತು.

                ಯಕೃತ್ತು ಕಸಿ ಅವರನ್ನುಳಿಸಲು ಏಕಮೇವ ಮಾತ್ರವಾಗಿತ್ತು. ಆದರೆ ಸೂಕ್ತ ದಾನಿಯನ್ನು ಹುಡುಕುವ ಕುಟುಂಬದ ಎಲ್ಲ ಪ್ರಯತ್ನಗಳು ವಿಫಲವಾದಾಗ ತನ್ನ ಯಕೃತ್ತಿನ ಭಾಗವನ್ನೇ ತಂದೆಗೆ ದಾನ ಮಾಡಲು ದೇವಾನಂದಾ ನಿರ್ಧರಿಸಿದ್ದಳು. ಆದರೆ ತಾನು ಅಪ್ರಾಪ್ತ ವಯಸ್ಕಳಾಗಿರುವುದರಿಂದ ಕಾನೂನಿನಲ್ಲಿ ಅದಕ್ಕೆ ಅವಕಾಶ ಇಲ್ಲ ಎನ್ನುವುದು ಗೊತ್ತಾದಾಗ ಎಲ್ಲ ಸಾಧ್ಯತೆಗಳನ್ನೂ ಅನ್ವೇಷಿಸಿದ್ದಳು.

                 ಅಂತರ್ಜಾಲವನ್ನು ಜಾಲಾಡಿದಾಗಿ ನ್ಯಾಯಾಲಯವೊಂದು ಅಪ್ರಾಪ್ತ ವಯಸ್ಕ ಮಗುವೊಂದರಿಂದ ಅಂಗದಾನಕ್ಕೆ ಅನುಮತಿ ನೀಡಿದ್ದನ್ನು ಕಂಡುಕೊಂಡಿದ್ದಳು. ಇದನ್ನು ನಿದರ್ಶನವಾಗಿಟ್ಟುಕೊಂಡು ದೇವಾನಂದಾ ಕೇರಳ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಳು.

                ಅಂಗದಾನಕ್ಕೆ ದೇವಾನಂದಾಗೆ ಅನುಮತಿ ನೀಡಿದ ಸಂದರ್ಭ ನ್ಯಾಯಾಲಯವು ಎಲ್ಲ ಅಡೆತಡೆಗಳ ವಿರುದ್ಧ ಆಕೆಯ ಹೋರಾಟವನ್ನು ಪ್ರಶಂಸಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries