ದುಬೈ, ಯುಎಇ: ರಾಷ್ಟ್ರವ್ಯಾಪಿ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಗಳ ನಡುವೆಯೇ, 1979ರ 'ಇಸ್ಲಾಮಿಕ್ ಕ್ರಾಂತಿ'ಯ 44ನೇ ವಾರ್ಷಿಕೋತ್ಸವವನ್ನು ಇರಾನ್ ಶನಿವಾರ ಆಚರಿಸಿತು.
ಸಾವಿರಾರು ಇರಾನಿಯರು ಕ್ರಾಂತಿಕಾರಿ ಮತ್ತು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ಧ್ವಜಗಳು, ಬಲೂನ್‌ಗಳು ಮತ್ತು ಫಲಕಗಳಿಂದ ಅಲಂಕರಿಸಲ್ಪಟ್ಟ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಸೇನೆಯು ತನ್ನ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರದರ್ಶಿಸಿತು.
ಟೆಹರಾನ್‌ನ ಆಜಾದಿ ಸ್ವೇರ್‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಇಬ್ರಾಹಿಂ ರೈಸಿ, 'ದೇಶದ ಅಭಿವೃದ್ಧಿಗೆ ತಡೆಯೊಡ್ಡುವ ಉದ್ದೇಶದಿಂದ ಇರಾನ್‌ನ ಶತ್ರು ರಾಷ್ಟ್ರಗಳ ಕುತಂತ್ರದ ಭಾಗವಾಗಿ ಈ ಪ್ರತಿಭಟನೆಗಳು ನಡೆಯುತ್ತಿವೆ' ಎಂದರು.
ವಸ್ತ್ರಸಂಹಿತೆ ಉಲ್ಲಂಘಿಸಿದ ಆರೋಪದ ಮೇರೆಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮಹ್ಸಾ ಅಮಿನಿ ಎಂಬ ಕುರ್ದಿಷ್ ಯುವತಿಯ ಬಂಧನ ಹಾಗೂ ಸಾವಿನ ಬಳಿಕ ಇರಾನ್‌ನಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು, ಶನಿವಾರವೂ, ಜನರು ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಿದರು.