HEALTH TIPS

ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು ಬಜೆಟ್‌ ವೀಕ್ಷಿಸಿದ ನಿರ್ಮಲಾ ಪುತ್ರಿ ವಾಙ್ಮಯಿ

 

* ಸಂಸತ್‌ನಲ್ಲಿ ಬುಧವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಿದ ವೇಳೆ ಅವರ ಪುತ್ರಿ ವಾಙ್ಮಯಿ ಪರಕಾಲ ಮತ್ತು ಸಂಬಂಧಿಕರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಲ್ಲಿ ಕುಳಿತು, ವೀಕ್ಷಿಸಿದರು

* ನರೇಂದ್ರ ಮೋದಿ ಅವರ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ವೀಕ್ಷಿಸಲು ಸಂದರ್ಶಕರ ಗ್ಯಾಲರಿ ಭರ್ತಿಯಾಗಿತ್ತು

* ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರಾಜ್ಯಸಭೆಯ ಹಲವು ಸದಸ್ಯರು ಸಹ ಹಾಜರಿದ್ದು, ಬಜೆಟ್‌ನಲ್ಲಿ ಘೋಷಿಸಿದ ಹಲವು ಪ್ರಸ್ತಾವಗಳ ಬಗ್ಗೆ ಟಿಪ್ಪಣಿ ಮಾಡಿಕೊಂಡರು

* ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ ದೇಶವು ಆರೋಗ್ಯಕರ ಆರ್ಥಿಕ ಬೆಳವಣಿಗೆ ದಾಖಲಿಸುತ್ತಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿರುವ ಭಾರತವನ್ನು ಆರ್ಥಿಕ ಪ್ರಗತಿಯಲ್ಲಿ 'ಪ್ರಕಾಶಮಾನ ನಕ್ಷತ್ರ'ವೆಂದು ಜಗತ್ತು ಗುರುತಿಸಿದೆ. ದೇಶದ ಸಾಧನೆಗಳನ್ನು ವಿಶ್ವ ಪ್ರಶಂಸಿಸುತ್ತಿದೆ- ಬಜೆಟ್‌ ಭಾಷಣದಲ್ಲಿ ಸಚಿವೆ ನಿರ್ಮಲಾ ಪ್ರತಿಪಾದನೆ

* ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಬೆಳವಣಿಗೆಯು ಶೇ 7 ಇದೆ. ಪ್ರಮುಖ ಆರ್ಥಿಕತೆಗಳಲ್ಲಿ ಈ ಬೆಳವಣಿಗೆ ಅತಿ ಹೆಚ್ಚು ಎನಿಸಿದೆ. ದೇಶದ ಆರ್ಥಿಕತೆಯು ಸರಿಯಾದ ಹಾದಿಯಲ್ಲಿದೆ - ನಿರ್ಮಲಾ ಬಣ್ಣನೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries