ಕಾಸರಗೋಡು: ಜಿಲ್ಲೆಯ ಕುಂಬ್ಡಾಜೆ ಕಜಮಲೆ ನಿವಾಸಿ, ಉದಯ-ಸವಿತಾ ದಂಪತಿ ಪುತ್ರಿ ಏಳು ವರ್ಷದ ಬಾಲಕಿ ಸಾನ್ವಿ ಯಶಸ್ವೀ ಚಿಕಿತ್ಸೆಯೊಂದಿಗೆ ಊರಿಗೆ ವಾಪಸಾಗಿದ್ದು, ಮುಂದಿನ ಆರು ತಿಂಗಳ ಕಾಲ ಚಿಕಿತ್ಸೆಯಲ್ಲಿ ಕಳೆಯಬೇಕಾಗಿದೆ ಎಂದು ಸಾನ್ವಿ ಚಿಕಿತ್ಸಾ ಸಮಿತಿ ಪದಾಧಿಕಾರಿ ಆನಂದ ಕೆ. ಮವ್ವಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 2022 ಜುಲೈ 25ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸಾನ್ವಿಗೆ ಅಸ್ಥಿಮಜ್ಜೆ ಕಸಿಗಾಗಿ ನಿರಂತರ ಆರು ತಿಂಗಳ ಕಾಲ ಚಿಕಿತ್ಸೆ ನೀಡಲಾಗಿದೆ. ಈಕೆ ಸಹೋದರಿ 12 ವರ್ಷ ಪ್ರಾಯದ ತನುಜಶ್ರೀ ಅಸ್ಥಿಮಜ್ಜೆ ದಾನಿಯಾಗಿದ್ದು ಇಬ್ಬರೂ ಆರೋಗ್ಯವಂತಾಗಿದ್ದಾರೆ.
ತಲಸ್ಸೇಮಿಯಾ ಮೇಜರ್ ಎಂಬ ಅಪೂರ್ವ ಕಾಯಿಲೆ ಇದಾಗಿದ್ದು, ಈಕೆ ಚಿಕಿತ್ಸೆಗಾಗಿ ಕ್ರಿಯಾಸಮಿತಿ ರಚಿಸಿ ದಾನಿಗಳಿಂದ ಹಣ ಸಂಗ್ರಹಿಸಲಾಗಿದ್ದು, ಕೇವಲ ಒಂದುವರೆ ತಿಂಗಳಲ್ಲಿ 57,06,635 ರೂ. ಸಂಗ್ರಹಿಸಲಾಗಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇದಕ್ಕೆ ಒಟ್ಟು 30 48 025 ಖರ್ಚು ಮಾಡಲಾಗಿದೆ. ಉಳಿಕೆಯಾಗಿರುವ 26,58,610 ರೂ. ಮೊತ್ತದಲ್ಲಿ ಸಾನ್ವಿ ಹಾಗೂ ತನುಜಶ್ರೀ ಅವರ ಮುಂದಿನ ಶಿಕ್ಷಣ ಹಾಗೂ ಭಾವೀ ಜೀವನಕ್ಕಾಗಿ ತಲಾ 11ಲಕ್ಷ ರೂ. ಠೇವಣಿಯಿರಿಸಲಾಗಿದೆ. ಬಾಕಿ ಮೊತ್ತ ಸಾನ್ವಿಯ ಮುಂದುವರಿಕಾ ಚಿಕಿತ್ಸೆಗಾಗಿ ವಿನಿಯೋಗಿಸುವ ನಿಟ್ಟಿನಲ್ಲಿ ಸಾನ್ವಿ ತಂದೆ ಖಾತೆಗೆ ನೀಡಲೂ ತೀರ್ಮಾನಿಸಲಾಗಿದೆ. ಮುಂದೆ ಪ್ರತಿ ತಿಂಗಳು ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಮುಂದುವರಿಸಬೇಕಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಸಹಾಯ ಸಮಿತಿ ಅಧ್ಯಕ್ಷ ಹಾಗೂ ಕುಂಬ್ಡಾಜೆ ಗ್ರಾಪಂ ಅಧ್ಯಕ್ಷ ಹಮೀದ್ ಪೆÇಸಳಿಗೆ, ಸಮಿತಿ ಸಂಚಾಲಕ ಸುವರ್ಣ ಮಾಸ್ಟರ್, ಕೋಶಾಧಿಕಾರಿ ಭಾಸ್ಕರ ಮೇಸ್ತ್ರಿ, ಸಂಚಾಲಕರಾದ ಶಶಿಧರ ತೆಕ್ಕೇಮೂಲೆ, ರಾಜೇಶ್ ಮಾಸ್ಟರ್ ಅಗಲ್ಪಾಡಿ ಉಪಸ್ಥಿತರಿದ್ದರು.
ಚಿಕಿತ್ಸೆ ಕಳೆದು ಊರಿಗೆ ವಾಪಸಾದ ಸಾನ್ವಿ: ಸಹಾಯ ನೀಡಿದವರಿಗೆ ಅಭಿನಂದನೆ ಸಲ್ಲಿಸಿದ ಕ್ರಿಯಾಸಮಿತಿ
0
ಫೆಬ್ರವರಿ 10, 2023