ಹೈದರಾಬಾದ್: ಆಯಪಲ್‌ಗೆ ಪರಿಕರಗಳನ್ನು ಪೂರೈಸುವ ಫಾಕ್ಸ್‌ಲಿಂಕ್‌ನ ಆಂಧ್ರ ಪ್ರದೇಶ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾರ ನಷ್ಟವುಂಟಾಗಿದೆ. ಈ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಗಿದ್ದು, 400 ಉದ್ಯೋಗಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಐಫೋನ್‌ಗಳಿಗೆ ಬೇಕಾದ ಕೇಬಲ್‌ಗಳನ್ನು ಪಾಕ್ಸ್‌ಲಿಂಕ್ ಪೂರೈಕೆ ಮಾಡುತ್ತದೆ. ಸಂಸ್ಥೆಯ ಉತ್ಪಾದನಾ ಘಟಕದಲ್ಲಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಶೇ 50ರಷ್ಟು ಯಂತ್ರೋಪಕರಣಗಳು ಹಾನಿಗೊಳಗಾಗಿದ್ದು, ಕಾರ್ಖಾನೆ ಕಟ್ಟಡದ ಅರ್ಧದಷ್ಟು ಭಾಗ ಕುಸಿದಿದೆ ಎಂದು ತಿರುಪತಿ ಜಿಲ್ಲೆಯ ವಿಪತ್ತು ನಿರ್ವಹಣಾ ಹಾಗೂ ಅಗ್ನಿಶಾಮಕ ಸೇವೆಗಳ ಇಲಾಖೆಯ ಜೆ ರಮಣಯ್ಯ ಹೇಳಿದ್ದಾರೆ.
ದುರಂತದಿಂದಾಗಿ ₹100 ಕೋಟಿಯಷ್ಟು ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಆಪಲ್ ತಕ್ಷಣ ಪ್ರತಿಕ್ರಿಯಿಸಲಿಲ್ಲ. ಫಾಕ್ಸ್‌ಲಿಂಕ್‌ನ ಅಧಿಕಾರಿಗಳಿಂದಲೂ ಮಾಹಿತಿ ಸಿಕ್ಕಿಲ್ಲ.