ಕರಾವಳಿ ಸವೆತವನ್ನು ಗಂಭೀರವಾಗಿ ಪರಿಗಣಿಸಬೇಕು: ಸುಧಾರಿತ ತಡೆಗಟ್ಟುವ ವಿಧಾನಗಳು ತುಂಬಾ ಪರಿಣಾಮಕಾರಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಗಾರ ಕುನಾಲ್ ಸತ್ಯಾರ್ಥಿ
0
ಫೆಬ್ರವರಿ 17, 2023
ತಿರುವನಂತಪುರಂ: ಪ್ರಸ್ತುತ ಪರಿಸ್ಥಿತಿಯಲ್ಲಿ ಕರಾವಳಿ ಕೊರೆತ ಅತ್ಯಂತ ಪ್ರಮುಖ ಬಿಕ್ಕಟ್ಟು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಗಾರ ಕುನಾಲ್ ಸತ್ಯಾರ್ಥಿ ಹೇಳಿದ್ದಾರೆ.
ಕರಾವಳಿ ಕೊರೆತ ನಿಧಾನವಾಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಇದೆ ಎಂದಿರುವರು.
ಅವರು ನಿನ್ನೆ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಮಣ್ಣಿನ ಸವಕಳಿ ತಡೆಗಟ್ಟಲು ಕ್ರಮಗಳ ಕರಡು ನೀತಿ ಮತ್ತು ಮಣ್ಣಿನ ಸವಕಳಿಯಿಂದ ಹಾನಿಗೊಳಗಾಗಿ ಸ್ಥಳಾಂತರಗೊಂಡ ವ್ಯಕ್ತಿಗಳ ಪುನರ್ವಸತಿ ಕುರಿತು ಮಾತನಾಡಿದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಇಒ ಹಾಗೂ ಮುಖ್ಯ ಕಾರ್ಯದರ್ಶಿ ವಿ.ಪಿ. ಸಂತೋಷ ಮಾತನಾಡಿದರು.
ಈ ಪ್ರದೇಶದಲ್ಲಿ ಹೆಚ್ಚಿನ ಅಧ್ಯಯನವು ಕಡ್ಡಾಯವಾಗಿದೆ. ಕರಾವಳಿಯ ಸವೆತವು ಹವಾಮಾನ ಬದಲಾವಣೆಯμÉ್ಟೀ ಗಂಭೀರ ಸಮಸ್ಯೆಯಾಗಿದೆ. ಮ್ಯಾಂಗ್ರೋವ್ ಕಾಡುಗಳ ಹರಡುವಿಕೆಯು ಕರಾವಳಿಯ ಸವೆತವನ್ನು ತಡೆಗಟ್ಟಲು ನೈಸರ್ಗಿಕ ಮಾರ್ಗವಾಗಿದೆ. ಅದಕ್ಕೂ ಮುನ್ನ 2050ರಲ್ಲಿ ತಟಸ್ಥ ಹವಾಮಾನದ ಗುರಿಯನ್ನು ಕೇರಳ ಸಾಧಿಸಲಿದೆ ಎಂದು ವಿ.ಪಿ. ಸಂತೋಷ ಹೇಳಿದರು. ಕರಾವಳಿ ಸವಕಳಿ ತಡೆಯುವ ಕ್ರಮಗಳನ್ನು ಜಾಗತಿಕ ಮಟ್ಟದಲ್ಲಿ ಚಿಂತಿಸಿ ಸ್ಥಳೀಯ ಮಟ್ಟದಲ್ಲಿ ಅನುμÁ್ಠನಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಚಾಲಕ ಎ. ಜೈತಿಲಕ್, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕೆ.ಎಸ್. ವತ್ಸ, ರಾಜ್ಯ ವಿಪತ್ತು ನಿರ್ವಹಣಾ ಆಯುಕ್ತ ಟಿ.ವಿ. ಅನುಪಮಾ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜಂಟಿಯಾಗಿ ಕಾರ್ಯಾಗಾರವನ್ನು ಆಯೋಜಿಸಿದ್ದವು. 14 ರಾಜ್ಯಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಕರಾವಳಿ ನದಿ ಸವೆತವನ್ನು ತಗ್ಗಿಸಲು ರಾಷ್ಟ್ರೀಯ ನೀತಿ, ವಿಪತ್ತು ಪರಿಹಾರ ಯೋಜನೆಗಳು, ಕರಾವಳಿ ಪ್ರದೇಶಗಳ ಪುನರ್ವಸತಿ, ತಗ್ಗಿಸುವಿಕೆ ಮತ್ತು ಪುನರ್ವಸತಿ ಯೋಜನೆಗಳ ಯೋಜನೆ ಮತ್ತು ಅನುμÁ್ಠನದಂತಹ ವಿಷಯಗಳನ್ನು ಚರ್ಚೆಯಲ್ಲಿ ಸೇರಿಸಲಾಗಿತ್ತು.