ತಿರುವನಂತಪುರ: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತರಬೇತಿ ವಿಮಾನವೊಂದು ಪತನಗೊಂಡಿದೆ. ರಾಜೀವ್ ಗಾಂಧಿ ಏವಿಯೇμÀನ್ ಅಕಾಡೆಮಿಗೆ ಸೇರಿದ ಸಣ್ಣ ತರಬೇತಿ ವಿಮಾನ ಅಪಘಾತಕ್ಕೀಡಾಗಿದೆ.
ಟೇಕ್-ಆಫ್ ಸಮಯದಲ್ಲಿ ನಿಯಂತ್ರಣ ಕಳಕೊಂಡ ವಿಮಾನ ಪತನಗೊಂಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಯಾರಿಗೂ ಗಾಯವಾಗಿಲ್ಲ.
ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪತನದ ವೇಳೆ ಬೆಂಕಿ ಹತ್ತಿಕೊಳ್ಳದ ಕಾರಣ ಅನಾಹುತ ತಪ್ಪಿದೆ ಎಂದು ಅಧಿಕೃತರು ತಿಳಿಸಿದ್ದಾರೆ.
ತಿರುವನಂತಪುರದಲ್ಲಿ ತರಬೇತಿ ವಿಮಾನ ಪತನ: ಗಾಯಗಳಿಲ್ಲದೆ ಪಾರು
0
ಫೆಬ್ರವರಿ 08, 2023