ಕಾಸರಗೋಡು: ಕೇರಳ ರಾಜ್ಯ ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ನೇತೃತ್ವದಲ್ಲಿಕೋಟೆಯವರ ಯಾನೆ ಕೋಟೆಗಾರರ ಮಹಿಳಾ ಹಾಗೂ ಯುವಕ ಸಂಘದ ಸಮಾವೇಶ ಮೀಪುಗುರಿಯಲ್ಲಿರುವ ಸಂಘದ ಸಭಾಂಗಣದಲ್ಲಿ ಜರುಗಿತು.
ಸೇವಾಸಂಘದ ಅಧ್ಯಕ್ಷ ನಿವೃತ್ತಮುಖ್ಯೋಪಾಧ್ಯಯ ವಿಶ್ವನಾಥಕೋಟೆಕಣಿ ಸಮಾರಂಭ ಉದ್ಘಾಟಿಸಿದರು. ಕೋಶಾಧಿಕಾರಿ ದಿವಾಕರ ಮೀಪುಗುರಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿಪಾಂಡುರಂಗ ವಿದ್ಯಾನಗರ, ಲಲಿತಾಕೇಶವ, ಪಾಂಡುರಂಗ ಸಿರಿಬಾಗಿಲು, ದಿನೇಶ್‍ನಾಗರಕಟ್ಟೆ, ಹರೀಶ ಅಣಂಗೂರು ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷರಾಗಿ ಮುರಳಿಧರಪಾರೆಕಟ್ಟ, ಕಾರ್ಯದರ್ಶಿಯಾಗಿ ಮೋಹನ್ ರಾಜ್,ಕೋಶಾಧಿಕಾರಿಯಾಗಿ ಮೋದಕ್ ರಾಜ್, ಹಾಗೂ ಮಹಿಳಾಸಂಘದ ಅಧ್ಯಕ್ಷರಾಗಿ ಗೀತಾ ಪಚ್ಚಕಾಡ್, ಕಾರ್ಯದರ್ಶಿಯಾಗಿ ವಿಜಯಲಕ್ಷ್ಮಿಪಾಂಡುರಂಗವಿದ್ಯಾನಗರ, ಕೋಶಾಧಿಕಾರಿಯಾಗಿ ಪ್ರಪುಲ್ಲ ಕೇಶವ ಇವರನ್ನು ಆಯ್ಕೆಮಾಡಲಾಯಿತು. ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ರಾವ್ ಕೊರಕ್ಕೋಡು ಸ್ವಾಗತಿಸಿದರು. ಕಿರಣ್ ಪ್ರಸಾದ್‍ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪಾಂಡುರಂಗ ವಿದ್ಯಾನಗರ ವಂದಿಸಿದರು.
ಕೋಟೆಯವರ ಯಾನೆ ಕೋಟೆಗಾರರ ಸೇವಾ ಸಂಘದ ಯವಕ, ಮಹಿಳಾ ಸಂಘ ಸಮಿತಿ ರಚನಾ ಸಭೆ
0
ಫೆಬ್ರವರಿ 10, 2023