HEALTH TIPS

ಹೊರ ರೋಗಿಗಳಿಗೆ ಸಹಾಯಕವಾಗಿ ಪೆರ್ಲ ಕುಟುಂಬಾರೋಗ್ಯ ಕೇಂದ್ರದಲ್ಲಿ ಸಂಜೆ ಒಪಿ ವಿಭಾಗ ಉದ್ಘಾಟನೆ


        ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಪೆರ್ಲ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಹೊರ ರೋಗಿಗಳಿಗೆ ಅನುಕೂಲಕರವಾಗಿ ಹೆಚ್ಚುವರಿ ಸಂಜೆ ಒಪಿ ಕಾರ್ಯಚರಣಾ ವಿಭಾಗದ ಉದ್ಘಾಟನೆ ಗುರುವಾರ ನಡೆಯಿತು.  
          ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಮುಖ್ಯ ಕೇಂದ್ರವಾದ ಪೆರ್ಲದಲ್ಲಿ ಸಂಜೆಯವರೆಗೂ ವೈದ್ಯ ಸೌಲಭ್ಯವನ್ನು ಪಂಚಾಯತಿ ಯೋಜನಾ ನಿಧಿ ವಿನಿಯೋಗಿಸಿ  ಒದಗಿಸುವ ಮೂಲಕ ಮಹತ್ತರವಾದ ಕಾರ್ಯ ನಡೆಸಲಾಗುತ್ತಿದ್ದು ಸೌಲಭ್ಯ ಮುಂದುವರಿಯುವಂತೆ ಜನತೆ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
          ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆವಹಿಸಿ ಮಾತನಾಡಿ, ಪಂ.ವತಿಯಿಂದ ಆರೋಗ್ಯ ರಂಗದಲ್ಲಿ ವಿಪುಲವಾದ ಯೋಜನೆ ಕೈಗೆತ್ತಿಕೊಂಡಿದ್ದು ಇದರ ಅಂಗವಾಗಿ ಕೇರಳ ಸರ್ಕಾರದ ಆದ್ರ್ರಂ ಯೋಜನೆಯ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕುಟುಂಬ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಿ ನೂತನ ಕಟ್ಟಡದಲ್ಲಿ ಕಾರ್ಯಚರಿಸುವಂತಾಗಿಸಿದ್ದು ಇದೀಗ ಮಧ್ಯಾಹ್ಬ ವರೆಗಿನ ವೈದ್ಯ ಸೇವೆಯಲ್ಲದೆ ಸಂಜೆಯ ವರೆಗೂ ವಿಶೇಷ ಯೋಜನೆಯ ಮೂಲಕ ವಿಸ್ತರಿಸಿರುವುದು ಎಂಡೋಸಲ್ಫಾನ್ ಪೀಡಿತ ಹಾಗೂ ಗ್ರಾಮೀಣ ಪ್ರದೇಶದ ರೋಗಿಗಳಿಗೆ ಉಪಯೋಗಕರವಾಗಲಿ ಎಂಬ ಉದ್ದೇಶದಿಂದಾಗಿದೆ ಎಂದರು.
            ಗ್ರಾ.ಪಂ.ಉಪಾಧ್ಯಕ್ಷೆ ಡಾ. ಜಹನಾಸ್ ಹಂಸಾರ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಅನಿಲ್ ಕುಮಾರ್ ಕೆ.ಪಿ, ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಜಯಶ್ರೀ ಕುಲಾಲ್, ಸೌದಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ, ಇಂದಿರಾ, ರಾಮಚಂದ್ರ, ನರಸಿಂಹ ಪೂಜಾರಿ, ರಮ್ಲ, ರಾಧಾಕೃಷ್ಣ ನಾಯಕ್ ಶೇಣಿ, ಕುಸುಮಾವತಿ, ಉμÁ ಕುಮಾರಿ, ಝರೀನಾ ಮುಸ್ತಾಫ, ಆಶಾಲತಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
           ಪಂ.ಕಾರ್ಯದರ್ಶಿ ಸುನಿಲ್ ಆರ್ ಪ್ರಸ್ತಾವಿಕವಾಗಿ ಮಾತನಾಡಿದರು. ಕುಟುಂಬ ಆರೋಗ್ಯ ಕೇಂದ್ರದ ವೈದಾಧಿಕಾರಿ  ಡಾ.ಕ್ರಿಸ್ಟಿ ಸ್ವಾಗತಿಸಿ ಸಂಜೆ ಒ.ಪಿ.ವಿಭಾಗದ ನಿಯುಕ್ತ ವೈದ್ಯಾಧಿಕಾರಿ ಡಾ.ಕೇಶವ ನಾಯ್ಕ್ ವಂದಿಸಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries