ಕಾಸರಗೋಡು:ನೋರ್ಕಾ ರೂಟ್ಸ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಆಯೋಜಿಸಿರುವ ಎರಡು ದಿನಗಳ ಪ್ರವಾಸಿ ಸಾಲ ಮೇಳ ಇಂದಿನಿಂದ (ಫೆಬ್ರವರಿ 9) ಆರಂಭ. ಈ ಮೇಳವು ಕಲ್ಲಿಕೋಟೆ, ವಯನಾಡ್ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರವಾಸಿ ಉದ್ಯಮಿಗಳಿಗಾಗಿ ಮೇಳ ನಡೆಯಲಿದೆ. ಸಾಲ ಮೇಳದ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಕಲ್ಲಿಕೋಟೆಯ ಯೂನಿಯನ್ ಬ್ಯಾಂಕ್ ಎಂ ಎಸ್ ಎಂ ಇ ಫಸ್ಟ್ ಬ್ರಾಂಚ್ ನಲ್ಲಿ ಬೆಳಗ್ಗೆ 10.30ಕ್ಕೆ ನೋರ್ಕಾ ರೂಟ್ಸ್ ರೆಸಿಡೆನ್ಸ್ ಉಪಾಧ್ಯಕ್ಷರಾದ ಪಿ. ಶ್ರೀರಾಮಕೃಷ್ಣನ್ ನೆರವೇರಿಸುವರು. ಯೂನಿಯನ್ ಬ್ಯಾಂಕ್ ಕಲ್ಲಿಕೋಟೆ ಪ್ರಾದೇಶಿಕ ಮುಖ್ಯಸ್ಥೆ ರೋಸಲಿನ್ ರೋಡ್ರಿಗಸ್ ಅಧ್ಯಕ್ಷತೆ ವಹಿಸುವರು. ಎನ್ ಡಿ ಪಿ ಆರ್ ಇ ಎಂ ಯೋಜನೆಯ ಬಗ್ಗೆ ನೋರ್ಕಾ ರೂಟ್ಸ್ ಜನರಲ್ ಮ್ಯಾನೇಜರ್ ಅಜಿತ್ ಕೊಳ ……ಸೆರಿ, ಸಾಲ ಬಗ್ಗೆ ವಿವರಣೆಗಳನ್ನು ಚೀಫ್ ಮುಖ್ಯ ವ್ಯವಸ್ಥಾಪಕ ವಿ ಕೆ ಆದರ್ಶ್ ವಿವರಿಸಲಿದ್ದಾರೆ. ಶಾಖಾ ಪ್ರಬಂಧಕ ಪಿ. ಕೆ. ಬಿಜಿಶಾ ಸ್ವಾಗತಿಸಿ, ಉಪಶಾಖೆ ವ್ಯವಸ್ಥಾಪಕ ಆರ್. ಬಿ. ಜಿತಿನ್ ವಂದಿಸುವರು.
ಸ್ಥಳಗಳು :ಕಲ್ಲಿಕೋಟೆ : (ಯೂನಿಯನ್ ಎಂ ಎಸ್ ಎಂ ಇ ಮೊದಲ ಶಾಖೆ, ಪಾರ್ಕೊ ಕಾಂಪ್ಲೆಕ್ಸ್, ಕಲ್ಲೈ ರಸ್ತೆ),
ಕಣ್ಣೂರು: (ಕಣ್ಣೂರು ಮುಖ್ಯ ಶಾಖೆ, ಫೋರ್ಟ್ ರಸ್ತೆ), ಕಾಸರಗೋಡು :( ಜನರಲ್ ಆಸ್ಪತ್ರೆಯ ಸಮೀಪವಿರುವ ಶಾಖೆ ),
ವಯನಾಡ್ (ಕಲ್ಪಟ್ಟಾ ಶಾಖೆ, ಬಾಗಿಲು ಸಂಖ್ಯೆ 9 /305 /3) ಮುಖ್ಯ ರಸ್ತೆ ಕಲ್ಪೆಟ್ಟಾ ರಾಷ್ಟ್ರೀಯ ಹೆದ್ದಾರಿ).
ಮೇಳ ನಡೆಯುವ ಶಾಖೆಗಳಲ್ಲಿ ಸ್ಪಾಟ್ ನೋಂದಣಿಯೂ ಲಭ್ಯವಿರುತ್ತದೆ. ಮೊದಲೇ ನೋಂದಣಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ಎರಡು ವರ್ಷಕ್ಕಿಂತ ಹೆಚ್ಚು ಕಾಲ ವಿದೇಶದಲ್ಲಿ ಕೆಲಸ ಮಾಡಿದೇ ಎಂದು ಸಾಬೀತುಪಡಿಸಲು ಪಾಸ್‌ಪೋರ್ಟ್ ಪ್ರತಿ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್, ಪ್ಯಾನ್‌ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಯೋಜನೆ ವಿವರಣೆ ಮತ್ತು ಯೋಜನೆಗೆ ಅಗತ್ಯವಿರುವ ಇತರ ದಾಖಲೆಗಳೊಂದಿಗೆ ಸಾಲಮೇಳ ನಡೆಯುವ ಸ್ಥಳಗಳಿಗೆ ಬೆಳಗ್ಗೆ 10 ಗಂಟೆಗೆ ಮೊದಲು ತಲುಪಬೇಕು.
ನಿಯಮಿತ ಸಾಲ ಮರುಪಾವತಿ ಮಾ ಡುವ ಉದ್ಯಮಿಗಳಿಗೆ 15 ಶೇಕಡಾ ಬಂಡವಾಳ ಸಬ್ಸಿಡಿ (ಗರಿಷ್ಠ 3 ಲಕ್ಷ ರೂಪಾಯಿಗಳ ವರೆಗೆ) 3 ಶೇಕಡಾ ಬಡ್ಡಿ ಸಬ್ಸಿಡಿ (ಮೊದಲ 4 ವರ್ಷಗಳವರೆಗೆ) ಎನ್ ಡಿ ಪಿ ಆರ್ ಇ ಎಂ ಯೋಜನೆಯ ಮೂಲಕ ಉದ್ಯಮಿಗಳಿಗೆ ಲಭಿಸುತ್ತದೆ. ಪಡೆಯುತ್ತಾರೆ. ಇದರೊಂದಿಗೆ ಯೋಜನಾ ವರದಿಯನ್ನು ಉಚಿತವಾಗಿ ಸಿದ್ಧಪಡಿಸಿ ನೀಡಲಾಗುವುದು. ಮರಳಿ ಬರುವ ವಲಸಿಗರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಪುನರ್ವಸತಿಯನ್ನು ಸಾಕಾರಗೊಳಿಸಲು ಹೊಸ ಉದ್ಯಮಗಳನ್ನು ಪ್ರಾರಂಭಿಸಬೇಕು. ಹೆಚ್ಚಿನ ಮಾಹಿತಿಗಾಗಿ ನೋರ್ಕಾ ಗ್ಲೋಬಲ್ ಕಾಂಟ್ಯಾಕ್ಟ್ ಸೆಂಟರ್ 24 ಗಂಟೆಗಳ ಟೋಲ್ ಫ್ರೀ ಸಂಖ್ಯೆಗಳನ್ನು 1800 425 3939 (ಭಾರತದಿಂದ) +91-8802 012 345 (ವಿದೇಶದಿಂದ, ಮಿಸ್ಡ್ ಕಾಲ್ ಸೇವೆ) ಅಥವಾ ನೋರ್ಕಾ ರೂಟ್ಸ್ ಪ್ರಧಾನ ಕಛೇರಿ 0471-2770500 ( ಕಛೇರಿ ದಿನಗಳಲ್ಲಿ, ಕಛೇರಿ ಸಮಯದಲ್ಲಿ) ಸಂಪರ್ಕಿಸಬೇಕು.