ಎಲ್ಲರಲ್ಲೂ ಕೂದಲ ಬೆಳವಣಿಗೆ ಒಂದೇ ರೀತಿಯಲ್ಲಿ ಇರುವುದಿಲ್ಲ. ಅನೇಕರಿಗೆ ಕೂದಲು ಚೆನ್ನಾಗಿ ಬೆಳದರೆ ಇನ್ನೂ ಕೆಲವರಲ್ಲಿ ಬೆಳೆಯುವ ನಾಲ್ಕು ಕೂದಲು ಕೂಡ ಉದುರಿ ಹೋಗುತ್ತದೆ. ಕೂದಲು ಉದುರಲು ಅನೇಕ ಕಾರಣಗಳು ಇರಬಹುದು. ಆದು ನಿಮ್ಮ ಕೂದಲ ಆರೈಕೆಯ ಮೇಲೂ ಕೂಡ ನಿರ್ಧಾರವಾಗಿರುತ್ತದೆ.
ನಮ್ಮಲ್ಲಿ ಪ್ರತಿನಿತ್ಯ ತಲೆ ಸ್ನಾನ ಮಾಡುವವರು ಇದ್ದಾರೆ. ಎರಡು ದಿನಗಳಿಗೊಮ್ಮೆ, ಮೂರು ದಿನಗಳಿಗೊಮ್ಮೆ ಅಷ್ಟೇ ಯಾಕೆ ವಾರಗಟ್ಟಲೇ ಸ್ನಾನ ಮಾಡದವರು ಇದ್ದಾರೆ. ಅಷ್ಟಕ್ಕೂ ವಾರಾಂತ್ಯದವರೆಗೂ ಸ್ನಾನ ಮಾಡದೆ ಇರೋದು ಒಳ್ಳೆಯದಾ? ಕೆಟ್ಟದ್ದಾ? ವೈದ್ಯರು ಈ ಬಗ್ಗೆ ಏನು ಹೇಳ್ತಾರೆ? ದಿನ ನಿತ್ಯ ತಲೆಸ್ನಾನ ಮಾಡುವುದರಿಂದ ಆಗುವ ಪರಿಣಾಮಗಳೇನು? ಅನ್ನುವುದರ ಬಗ್ಗೆ ಹೇಳ್ತೀವಿ.
ಯಾವಾಗ ತಲೆಸ್ನಾನ ಮಾಡಬೇಕು?
ಬೆವರು, ಧೂಳು, ಅತಿಯಾದ ಸೆಕೆಯಿಂದಾಗಿ ದಿನ ನಿತ್ಯ ತಲೆಸ್ನಾನ ಮಾಡುವವರಿದ್ದಾರೆ ಆದ್ರೆ ದಿನನಿತ್ಯ ತಲೆ ಸ್ನಾನ ಮಾಡುವುದು ಒಳ್ಳೆಯದಲ್ಲ. ಇದರಿಂದಾಗಿ ನಿಮ್ಮ ತಲೆ ಬುಡವು ಎಣ್ಣೆಯ ಅಂಶ ಕಳೆದುಕೊಳ್ಳುತ್ತದೆ. ಹಾಗೂ ಕೂದಲ ಬುಡ ಸಂಪೂರ್ಣವಾಗಿ ಒಣಗುತ್ತದೆ. ಕೂದಲಿನ ತುದಿ ಇಬ್ಬಾಗವಾಗುತ್ತದೆ. ಹಾಗೆಂದ ಮಾತ್ರಕ್ಕೆ ವಾರಕ್ಕೆ ಒಂದು ಬಾರಿ ಸ್ನಾನ ಮಾಡುವುದು ಕೂಡ ಒಳ್ಳೆಯದಲ್ಲ.
ವಾರಕ್ಕೊಂದು ಬಾರಿ ತಲೆ ಸ್ನಾನ ಒಳ್ಳೆಯದಾ?
ವೈದ್ಯರು ವಾರಕ್ಕೊಂದು ಬಾರಿ ಶಾಂಪೂ ಬಳಸಿ ಸ್ನಾನ ಮಾಡಿ ಎಂದು ಸಲಹೆ ನೀಡುತ್ತಾರೆ. ಆದರೆ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ. ಒಂದು ವೇಳೆ ಒರ್ವ ವ್ಯಕ್ತಿಗೆ ಒಣ ಕೂದಲಿದ್ದರೆ ಆಗಾಗ್ಗೆ ಕೂದಲು ತೊಳೆಯದಿದ್ದಲ್ಲಿ, ಅದು ಅದರ ನೈಸರ್ಗಿಕ ತೇವಾಂಶವನ್ನು ಕಳೆದುಕೊಳ್ಳಬಹುದು. ಧೂಳು, ಕೊಳೆಯಿಂದಾಗಿ ಕಿರುಚೀಲ ಮುಚ್ಚಿ ಹೋಗಿ ಆಮ್ಲಜನಕದ ಅಸಮರ್ಪಕತೆ ಉಂಟಾಗಬಹುದು. ಹೀಗಾಗಿ ವಾರಕ್ಕೊಂದು ಬಾರಿ ಅಥವಾ ವಾರದ ನಂತರವೂ ಸ್ನಾನ ಮಾಡದೇ ಇರುವುದು ಉತ್ತಮವಲ್ಲ.
ವಾರಕ್ಕೆರಡು ಬಾರಿ ತಲೆ ಸ್ನಾನ ಮಾಡದೆ ಹೋದರೆ ಏನಾಗುತ್ತೆ?
ನಿಮ್ಮ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯದಿದ್ದರೆ, ಕೋಶಕವು ಮುಚ್ಚಿಹೋಗುತ್ತದೆ ಮತ್ತು ನೆತ್ತಿಯ ಸಿಪ್ಪೆ ಸುಲಿಯುವಿಕೆ, ತುರಿಕೆ, ತಲೆಹೊಟ್ಟಿನಂತಹ ಸಮಸ್ಯೆ ಉಂಟಾಗುತ್ತದೆ. ಮತ್ತು ಇದರಿಂದ ಕೂದಲು ಉದುರಲು ಕಾರಣ ಆಗಬಹುದು.
ವಾರಕ್ಕೆ ಎಷ್ಟು ಬಾರಿ ತಲೆಸ್ನಾನ ಮಾಡಬೇಕು?
ಅತಿಯಾಗಿ
ತಲೆಸ್ನಾನ ಮಾಡುವುದು ಅಥವಾ ತಲೆ ಸ್ನಾನ ಮಾಡದೇ ಯಾರವಾಗಲೋ ಒಮ್ಮೆ ತಲೆ ಸ್ನಾನ ಮಾಡುವುದು
ಉತ್ತಮವಲ್ಲ. ಹೀಗಾಗಿ ನೀವು ಎಲ್ಲಿ ವಾಸವಾಗಿದ್ದೀರಿ, ಯಾವ ರೀತಿಯ ಜೀವನ ಶೈಲಿಯನ್ನು ಮೈ
ಗೂಡಿಸಿಕೊಂಡಿದ್ದೀರಿ ಎಂಬುವುದು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ ಕಡಿಮೆ
ಮಾಲಿನ್ಯವಿರುವ ಪ್ರದೇಶದಲ್ಲಿ ವಾಸಿಸುವವರು ಅಥವಾ ನಗರದಲ್ಲಿ ವಾಸಿಸುವವರು ಆಗಾಗ್ಗೆ
ತಮ್ಮ ಕೂದಲನ್ನು ತೊಳೆಯಬೇಕಾಗಿಲ್ಲ. ನಿಮ್ಮ ನೆತ್ತಿಯ ಮೇಲೆ ಸಂಗ್ರಹವಾಗಬಹುದಾದ ಎಲ್ಲಾ
ಕೊಳಕುಗಳನ್ನು ತೆಗೆದುಹಾಕಲು ವಾರಕ್ಕೆ ಎರಡು ಬಾರಿ ತೊಳೆಯುವ ಅವಶ್ಯಕತೆಯಿದೆ.
ಹೀಗಾಗಿ ನಿಮಗೆ ಕೂದಲು ಉದುರುವ ಅಥವಾ ಬೇರೆ ಯಾವುದೇ ಸಮಸ್ಯೆಗಳಿದ್ದರೂ ತಜ್ಞರ ಸಲಹೆ ಪಡೆದುಕೊಳ್ಳಿ.