ಕಾಸರಗೋಡು:ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿ ಸಿದ್ಧಪಡಿಸಿರುವ ಒಂದು ದಿನದ ಪ್ರವಾಸ ಕಾರ್ಯಕ್ರಮವಾದ ಉಲ್ಲಾಸಯಾತ್ರೆ ಇದೀಗ ಕಾಸರಗೋಡು ಜಿಲ್ಲೆಯಲ್ಲೂ ಲಭ್ಯವಿದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಮತ್ತು ಕೆಎಸ್‌ಆರ್‌ಟಿಸಿ ಟಿಕೆಟ್ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಉಲ್ಲಾಸಯಾತ್ರೆ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಕೆಎಸ್‌ಆರ್‌ಟಿಸಿಯ ಬಜೆಟ್ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕಾಸರಗೋಡು ಘಟಕದಿಂದ ಚೊಚ್ಚಲ ಯಾತ್ರೆ ಫೆಬ್ರವರಿ 18ರಂದು ಕಣ್ಣೂರಿಗೆ ಹೊರಡಲಿದೆ. ಕಣ್ಣೂರು ಜಿಲ್ಲೆಯ ಸ್ನೇಕ್ ಪಾರ್ಕ್, ವಿಸ್ಮಯ ಪಾರ್ಕ್, ಪರಶ್ಶಿನಿಕಡವ್, ಮಾಡೈಪ್ಪಾರ ಎಂಬೀ ಸ್ಥಳಗಳನ್ನು ಸೇರಿಸಿ ಪ್ರವಾಸವನ್ನು ಆಯೋಜಿಸಲಾಗಿದೆ. ಫೆಬ್ರವರಿ 25 ರಂದು ವಯನಾಡ್‌ಗೆ ಎರಡನೇ ಉಲ್ಲಾಸಯಾತ್ರೆ. ಈ ಪ್ರವಾಸ ಎರಡು ದಿನಗಳ ಕಾಲ. ಒಂದು ದಿನ ವಯನಾಡಿನಲ್ಲಿ ನಿಂತು ಜಂಗಲ್ ಸಫಾರಿ, ಎಡಕ್ಕಲ್ ಗುಹೆ, ಬಾಣಾಸುರ ಸಾಗರ್, ಕಾರ್ಲಾಡ್ ಸರೋವರ, ಹೆರಿಟೇಜ್ ಮ್ಯೂಸಿಯಂ ಮತ್ತು ಪಳಶ್ಶಿ ಸ್ಮಾರಕ ಎಂಬೀ ಸ್ಥಳಗಳನ್ನು ಸಂದರ್ಶಿಸಿ ವಾಪಸಾಗುವಂತೆ ಈ ಪ್ಯಾಕೇಜನ್ನು ಕ್ರಮೀಕರಿಸಲಾಗಿದೆ.
ಸಾಮಾನ್ಯ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ಕೇರಳದ ಪ್ರಮುಖ ಪ್ರವಾಸಿ ತಾಣಗಳನ್ನು ನೋಡಲು ಕೆಎಸ್‌ಆರ್‌ಟಿಸಿ ಸುರಕ್ಷಿತ ಮತ್ತು ಸ್ವತಂತ್ರ ಪ್ರಯಾಣದ ಅನುಭವವನ್ನು ನೀಡಲಿದೆ. ಪ್ರಯಾಣಿಕರು ಕುಟುಂಬ ಮತ್ತು ಮಕ್ಕಳೊಂದಿಗೆ ಈ ಪ್ರವಾಸಗಳಲ್ಲಿ ಭಾಗವಹಿಸಬಹುದು. ಕ್ಲಬ್‌ಗಳು, ರೆಸಿಡೆನ್ಸ್ ಅಸೋಸಿಯೇಷನ್‌ಗಳು ಮತ್ತು ಸರಕಾರಿ ಸಾರ್ವಜನಿಕ ವಲಯದ ನೌಕರರಿಗೆ ಬಸ್ಸನ್ನು ಸಂಪೂರ್ಣವಾಗಿಯೂ ಬುಕ್ಕಿಂಗ್ ಸೌಲಭ್ಯದ ಮೂಲಕವೂ ಕೆ ಎಸ್ ಆರ್ ಟಿ ಸಿ ಒದಗಿಸಲಿದೆ. ಪ್ರಯಾಣದ ಸಮಯ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ.
ಕೆ ಎಸ್ ಆರ್ ಟಿ ಸಿಯ ಟಿಕೆಟೇತರ ಆದಾಯವನ್ನು ಹೆಚ್ಚಿಸಲು, ಕೆ ಎಸ್ ಆರ್ ಟಿ ಸಿಯು ಕೇರದಾದ್ಯಂತ ಡಿಪೋಗಳಲ್ಲಿ ಬಜೆಟ್ ಪ್ರವಾಸೋದ್ಯಮ ಯೋಜನೆಯನ್ನು ರೂಪಿಸುವ ಮೂಲಕ ತನ್ನ ಆದಾಯವನ್ನು ಹೆಚ್ಚಿಸುತ್ತಿದೆ. ಕೇರಳದಲ್ಲಿ ಪ್ರಾದೇಶಿಕವಾಗಿ ಪ್ರಸಿದ್ದಿ ಪಡೆಯದ ಸ್ಥಳಗಳನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಲು ಕೆ ಎಸ್ ಆರ್ ಟಿ ಸಿ ಟೂರಿಸಂ ಯಾತ್ರೆಗೆ ಸಾದ್ಯವಿದೆ. ಕೇರಳದಾದ್ಯಂತ ಯೋಜನೆಯನ್ನು ವ್ಯಾಪಕಗೊಳಿಸುವುದರ ಭಾಗವಾಗಿ ಕಾಸರಗೋಡು ಡಿಪ್ಪೊದಿಂದಲೂ ಪ್ರವಾಸೋದ್ಯಮ ಯಾತ್ರೆಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಪ್ರವಾಸೋದ್ಯಮ ಸೌಲಭ್ಯಗಳು ದೊರಕಿಸಿ ಕೊಡುವುದು ಯೋಜನೆಯ ಪ್ರತ್ಯೇಕತೆಯಾಗಿದೆ. ಯಾತ್ರಾ ಶುಲ್ಕ, ಬುಕ್ಕಿಂಗ್ ಮತ್ತು ಇತರ ಮಾಹಿತಿಗಾಗಿ ದೂರವಾಣಿ 9495694525, 9446862282 ಸಂಪರ್ಕಿಸಿರಿ.