ಕಾಸರಗೋಡು: ಜಿಲ್ಲಾ ಕನ್ನಡ ಲೇಖಕರ ಸಂಘದ ವತಿಯಿಂದ ವಿಜಯಲಕ್ಷ್ಮೀ ಶ್ಯಾನುಭಾಗ್ ಅವರ'ಆವಿಯಾಗದ ಇಬ್ಬನಿ'ಕೃತಿ ಬಿಡುಗಡೆ ಹಾಗೂ ಸಾಹಿತ್ಯ ಸಲ್ಲಾಪ ಕಾರ್ಯಕ್ರಮ ಫೆ. 19ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ಜರುಗಲಿದೆ.
ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಕೃತಿ ಬಿಡುಗಡೆಗೊಳಿಸುವರು.ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ, ವೈದ್ಯ ಸಆಃಇತಿ ಡಾ. ರಮಾನಂದ ಬನಾರಿ ಅಧ್ಯಕ್ಷತೆ ವಹಿಸುವರು. ಶಿಕ್ಷಕಿ, ಕವಯಿತರಿ ಕವಿತಾ ಕೂಡ್ಲು ಕೃತಿಪರಿಚಯ ಮಾಡುವರು. ಸಾಹಿತಿ ಅಂಶುಮಾಲಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಲೇಖಕಿ ವಿಜಯಲಕ್ಷ್ಮೀ ಶ್ಯಾನುಭಾಗ್, ಡಾ. ಶಾರ್ವರಿ ಭಟ್, ಚಿತ್ರನಟ ಕಾಸರಗೋಡು ಚಿನ್ನಾ, ಸಹಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಉಪಸ್ಥಿತರಿರುವರು.
ಈ ಸಂದರ್ಭ ನಡೆಯುವ ಸಾಹಿತ್ಯ ಸಲ್ಲಾಪ ಕಾರ್ಯಕ್ರಮದಲ್ಲಿ ಡಾ. ಕೆ. ಕಮಲಾಕ್ಷ, ಟಿ.ಎ.ಎನ್ ಖಂಡಿಗೆ, ಡಾ. ಶ್ರೀಧರ ಎನ್, ಸತ್ಯನಾರಾಯಣ ವೈ, ಡಾ. ಪ್ರಮಿಳಾ ಮಾಧವ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಪಾಲ್ಗೊಳ್ಳುವರು.
ನಾಳೆ 'ಆವಿಯಾಗದ ಇಬ್ಬನಿ'ಕೃತಿ ಬಿಡುಗಡೆ, ಸಾಹಿತ್ಯ ಸಲ್ಲಾಪ ಕಾರ್ಯಕ್ರಮ
0
ಫೆಬ್ರವರಿ 17, 2023
Tags