ಕಾಸರಗೋಡು: ಶ್ರೀ ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠದಲ್ಲಿ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವದ ಸಂಧರ್ಭ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಉಪಸ್ಥಿತಿಯಲ್ಲಿ ಕೇರಳದ ಮಾಜಿ ಕಂದಾಯ ಸಚಿವರಾದ ಇ ಚಂದ್ರಶೇಖರನ್ ಅವರು ಶ್ರೀ ಮಠದ ಮುಂಭಾಗದಲ್ಲಿ ನೂತನ ಮಹಾದ್ವಾರ ಸಮರ್ಪಣೆ ಹಾಗೂ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರ ದಿವ್ಯ ಹಸ್ತದಿಂದ ತುಳುಲಿಪಿ ನಾಮಫಲಕ ಅನಾವರಣ ನಡೆಯಿತು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು, ಜೈ ತುಲುನಾಡ್ ಕಾಸರಗೋಡು ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ತುಳು ಸಾಹಿತಿ ವಿಜಯರಾಜ್ ಪುಣಿಚಿತ್ತಾಯ ಪುಂಡೂರು, ನಿವೃತ ಪ್ರಾಂಶುಪಾಲ ಹಾಗು ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಸಾಹಿತಿ ವೆಂಕಟ್ ಭಟ್ ಎಡನೀರು, ಚುಟುಕು ಕವಿ ಹಾಗು ವ್ಯಂಗ್ಯಚಿತ್ರ ಕಲಾವಿದ ರಾಘವೇಂದ್ರ ಕೆದಿಲಾಯ ಎಡನೀರು ಉಪಸ್ಥಿತರಿದ್ದರು. ಟಿ ಶ್ಯಾಮ್ ಭಟ್ ಬೆಂಗಳೂರು ಇವರು ಅಧ್ಯಕ್ಷತೆ ವಹಿಸಿದ್ದರು. ಪಿ. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಡಾ .ಶ್ರೀಪತಿ ಕಲ್ಲುರಾಯ ನಿರೂಪಿಸಿದರು. ಸೂರ್ಯ ಭಟ್ ಎಡನೀರು ವಂದಿಸಿದರು.