ಅಪೆಂಡಿಕ್ಸ್ ಕಾಯಿಲೆ ಯಾವುದೇ ವಯಸ್ಸಿನವರಲ್ಲೂ ಕಂಡು ಬರಬಹುದು, ಆದರೆ ಇತ್ತೀಚೆಗೆ ಚಿಕ್ಕ ಪ್ರಾಯದವರಿಗೆ ಹೆಚ್ಚಾಗಿ ಕಂಡು ಬರುತ್ತಿದೆ. ಹೊಟ್ಟೆಯ ಬಲಭಾಗದ ಕೆಳಗಡೆ ನೋವು ಉಂಟಾಗುವುದು.
ಹೊಟ್ಟೆ ನೋವು ಕಾಡುತ್ತಿದ್ದರೆ ಅಪೆಂಡಿಕ್ಸ್ ಇರಬಹುದೇ ಎಂಬ ಸಂಶಯ ಕೂಡ ಕೆಲವರಿಗೆ ಕಾಡುತ್ತದೆ. ಅಪೆಂಡಿಕ್ಸ್ ಲಕ್ಷಣಗಳೇನು?
ಹದಿಹರೆಯದವರಲ್ಲಿ ಹಾಗೂ ವಯಸ್ಕರಲ್ಲಿ ಅಪೆಂಡಿಕ್ಸ್ ಲಕ್ಷಣಗಳಲ್ಲಿ ವ್ಯತ್ಯಾಸ ಇರುವುದೇ ಮುಂತಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ನೋಡಿ:
ಸೊಂಟನೋವು ಅಪೆಂಡಿಕ್ಸ್ ಲಕ್ಷಣವಿರಬಹುದೇ?
ನಿಮ್ಮ ಸೊಂಟದ ಭಾಗದಲ್ಲಿ ನೋವು ಬಂದು ಆ ನೋವು 4 ಗಂಟೆಯಾದರೂ ಕಡಿಮೆಯಾಗದಿದ್ದರೆ ಅದು ಅಪೆಂಡಿಕ್ಸ್ ಲಕ್ಷಣವಿರಬಹುದು. ಈ ರೀತಿ ನೋವು ಬಂದರೆ ಕೂಡಲೇ ಚಿಕಿತ್ಸೆಯ ಅವಶ್ಯಕತೆ ಇದೆ. ಈ ರೀತಿ ನೋವು ಕಂಡು ಬಂದಾಗ ವೈದ್ಯರ ಭೇಟಿಯಾಗುವುದು ಒಳ್ಳೆಯದು.
ಮಕ್ಕಳಲ್ಲಿ ಅಪೆಂಡಿಕ್ಸ್ ಲಕ್ಷಣ ಭಿನ್ನವಾಗಿರುವುದೇ?
ವಯಸ್ಕರಲ್ಲಿ ಕಂಡು ಬರುವ ಅಪೆಂಡಿಕ್ಸ್ ಲಕ್ಷಣವೇ ಮಕ್ಕಳಲ್ಲಿ ಕಂಡು ಬರುವುದು, ಆದರೆ ಮಕ್ಕಳಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವುದು. ಹೊಟ್ಟೆ ಹಾಳಾಗುವುದು, ಹೊಕ್ಕಳ ಬಳಿ ನೋವು ಇವು ಮಕ್ಕಳಲ್ಲಿ ಕಂಡು ಬರುವ ಪ್ರಾರಂಭದ ಲಕ್ಷಣವಾಗಿದೆ. ನಂತರ ಆ ನೋವು ಹೊಟ್ಟೆಯ ಬಲಭಾಗದಲ್ಲಿ ಉಂಟಾಗುವುದು. ಎರಡು ವರ್ಷದ ಕೆಳಗಿನ ಮಗುವಾದರೆ ಪೋಷಕರು ಮಗುವಿನ ಹೊಟ್ಟೆ ಭಾಗ ಗಮನಿಸಬೇಕು. ಹೊಟ್ಟೆ ಉಬ್ಬಿದಂತಿರುವುದು. ಇನ್ನು ವಾಂತಿ, ಬೇಧಿ, ಜ್ವರ ಈ ಲಕ್ಷಣಗಳೂ ಕಂಡು ಬರುವುದು.
ಯಾರಿಗೆ ಅಪೆಂಡಿಕ್ಸ್ ಹೆಚ್ಚಾಗಿ ಬರುವುದು
ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡು ಬರುವುದು, ಅದರಲ್ಲೂ ಹದಿಹರೆಯದ ಪ್ರಾಯದಲ್ಲಿ, ಯೌವನ ಪ್ರಾಯದಲ್ಲಿ ಹೆಚ್ಚಾಗಿ ಕಂಡು ಬರುವುದು.
ಅಪೆಂಡಿಕ್ಸ್‌ಗೆ ಚಿಕಿತ್ಸೆ ಪಡೆಯದಿದ್ದರೆ ತುಂಬಾನೇ ಅಪಾಯಕಾರಿ, ಅದು ಒಡೆದರೆ ಸೋಂಕು ಅಧಿಕವಾಗಿ ಪರಿಸ್ಥಿತಿ ತುಂಬಾನೇ ಗಂಭೀರವಾಗುವುದು.
ಅಪೆಂಡಿಕ್ಸ್ ಉಂಟಾದಾಗ ಕೆಲವರಲ್ಲಿ ಈ ಬಗೆಯ ಲಕ್ಷಣಗಳೂ ಕಂಡು ಬರುವುದು
ಕೆಳಹೊಟ್ಟೆಯಲ್ಲಿ ತುಂಬಾ ನೋವು, ಮೂತ್ರ ವಿಸರ್ಜನೆಗೆ ಕಷ್ಟವಾಗುವುದು, ವಾಂತಿ, ಮಲಬದ್ಧತೆ ಅಥವಾ ಬೇಧಿ, ಗ್ಯಾಸ್ಟ್ರಿಕ್ ಸಮಸ್ಯೆ, ಜ್ವರ, ಕೆಳಹೊಟ್ಟೆ ಊದಿಕೊಳ್ಳುವುದು ಈ ಬಗೆಯ ಸಮಸ್ಯೆ ಕಂಡು ಬರುವುದು.
ಅಪೆಂಡಿಕ್ಸ್‌ಗೆ ಕಾರಣವೇನು?
ಅಪೆಂಡಿಕ್ಸ್ ಬ್ಲಾಕ್ ಆದರೆ, ಮಲ ಗಟ್ಟಿಯಾದರೆ. ಜಂತು ಹುಳು, ಹೊಟ್ಟೆ ಭಾಗಕ್ಕೆ ಪಟ್ಟಾದರೆ ಅಥವಾ ಗಡ್ಡೆಯಾದರೆ ಅಪೆಂಡಿಕ್ಸ್ ಸಮಸ್ಯೆ ಉಂಟಾಗುವುದು.
ಗರ್ಭಾವಸ್ಥೆಯಲ್ಲಿ ಅಪೆಂಡಿಕ್ಸ್
ಕೆಲವರಿಗೆ ಗರ್ಭಿಣಿಯಾಗಿದ್ದಾಗ ಅಪೆಂಡಿಕ್ಸ್ ಸಮಸ್ಯೆ ಕಾಣಿಸಿಕೊಳ್ಳುವುದು. ಈ ರೀತಿಯಾದಾಗ ಎದೆಯುರಿ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಅಥವಾ ಬೇಧಿ, ಹೊಟ್ಟೆಯ ಭಾಗದಲ್ಲಿ ಸೆಳೆತ, ವಾಂತಿ ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ಬಗೆಯ ಲಕ್ಷಣಗಳು ಗರ್ಭಾವಸ್ಥೆಯಲ್ಲೂ ಕಾಣಿಸಿಕೊಳ್ಳುವುದರಿಂದ ನಿರ್ಲಕ್ಷ್ಯ ಮಾಡುತ್ತಾರೆ, ಆದರೆ ನೋವು ತುಂಬಾ ವಿಪರೀತವಾಗಿದ್ದರೆ ನಿರ್ಲಕ್ಷ್ಯ ಮಾಡಬೇಡಿ.
ಅಪೆಂಡಿಕ್ಸ್ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುವವರಿಗೆ ಕರಿದ ಆಹಾರ, ಮದ್ಯ, ಕೊಬ್ಬಿನಂಶದ ಆಹಾರ, ಸಕ್ಕರೆ ಈ ಬಗೆಯ ಆಹಾರಗಳನ್ನು ಸೇವಿಸಬೇಡಿ.
ಅಪೆಂಡಿಕ್ಸ್ ಒಡೆದು ಹೋದರೆ ಏನಾಗುತ್ತದೆ?
ಒಂದು ವೇಳೆ ಸೂಕ್ತ ಚಿಕಿತ್ಸೆ ಪಡೆದರೆ ಅಪೆಂಡಿಕ್ಸ್ ಒಡೆದು ಹೋದರೆ ಸೋಂಕು ಇಡೀ ದೇಹವನ್ನು ಹರಡುವುದು. ಈ ರೀತಿಯಾದಾಗ ಅದು ಪ್ರಾಣಕ್ಕೆ ಕುತ್ತು ತರಬಹುದು, ಆದ್ದರಿಂದ ಅಪೆಂಡಿಕ್ಸ್ ಉಂಟಾದರೆ ತುಂಬಾ ದಿನ ಕಾಯಬಾರದು, ಕೂಡಲೇ ಸರ್ಜರಿ ಮಾಡಿಸಬೇಕು.
ಅಪೆಂಡಿಕ್ಸ್ ಚಿಕಿತ್ಸೆ
ಅಪೆಂಡಿಕ್ಸ್ ಉಂಟಾದರೆ ಸರ್ಜರಿ ಮಾಡಲಾಗುವುದು, ಇನ್ನು ಕೆಲವರಿಗೆ ಲ್ಯಾಪ್ರೋಸ್ಕೋಪಿ ಮಾಡಲಾಗುವುದು. ಬೊಜ್ಜು ಮೈ ಇರುವವರಿಗೆ, ವಯಸ್ಸಾದವರಿಗೆ ಈ ಚಿಕಿತ್ಸೆ ಸೂಕ್ತವಾಗಿದೆ. ಅಪೆಂಡಿಕ್ಸ್ ಒಡೆದು ಹೋದರೆ ಶಸ್ತ್ರ ಚಿಕಿತ್ಸೆ ಅತ್ಯಾವಶ್ಯಕವಾಗಿದೆ.
ಅಪೆಂಡಿಕ್ಸ್ ಚಿಕಿತ್ಸೆ ಬಳಿಕ ಆರೈಕೆ
* ಅಪೆಂಡಿಕ್ಸ್ ಚಿಕಿತ್ಸೆ ಬಳಿಕ 20- 1 ತಿಂಗಳವರೆಗೆ ವಿಶ್ರಾಂತಿ ಬೇಕಾಗುತ್ತದೆ. ಅದರಲ್ಲೂ ಎರಡು ವಾರ ಕಂಪ್ಲೀಟ್ ರೆಸ್ಟ್ ಬೇಕಾಗುತ್ತದೆ.
* ತುಂಬಾ ಕೆಮ್ಮು ಬಂದರೆ ಹೊಟ್ಟೆ ಭಾಗಕ್ಕೆ ದಿಂಬು ಒತ್ತಿ ಹಿಡಿಯಬೇಕು.
* ವೈದ್ಯರು ಸೂಚಿಸಿದ ಔಷಧಗಳನ್ನು ಸರಿಯಾಗಿ ತೆಗೆದುಕೊಳ್ಳಿ. ನೋವು ತುಂಬಾ ಇದ್ದರೆ ವೈದ್ಯರ ಸಲಹೆ ಪಡೆಯಿರಿ
* ಶಸ್ತ್ರ ಚಿಕಿತ್ಸೆ ಬಳಿಕ ಚೆನ್ನಾಗಿ ನಿದ್ದೆ ಮಾಡಿದಷ್ಟು ಬೇಗನೆ ಚೇತರಿಸಿಕೊಳ್ಳುತ್ತೀರಿ.
* ವೈದ್ಯರ ಸಲಹೆ ಪಡೆದ ಬಳಿಕ ವ್ಯಾಯಾಮ ಮಾಡಿ.