ಬದಿಯಡ್ಕ: ಎಡನೀರು ಶ್ರೀವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ನೇತೃತ್ವದಲ್ಲಿ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ತಾಂತ್ರಿಕತ್ವದಲ್ಲಿ ಫೆ.13 ರಿಂದ 17ರ ವರೆಗೆ ವಿವಿಧ ವಿಧಿವಿಧಾನಗಳೊಂದಿಗೆ ನಡೆಯಲಿದೆ.
ಫೆ.13 ರಂದು ಬೆಳಿಗ್ಗೆ 9.30 ಕ್ಕೆ ಧ್ವಜಾರೋಹಣ, |ಶ್ರೀಭೂತಬಲಿ, ಹೊರೆಕಾಣಿಕೆ ಮೆರವಣಿಗೆ, ರಾತ್ರಿ 8 ರಿಂದ ದೀಪೋತ್ಸವ ನಡೆಯಲಿದೆ. 14 ರಂದು ಬೆಳಿಗ್ಗೆ 9.30 ರಿಂದ ಶ|ರೀಭೂತಬಲಿ, ರಾತ್ರಿ 8 ರಿಂದ ದೀಪೋತ್ಸವ, ಫೆ.15 ರಂದು ಬೆಳಿಗ್ಗೆ 9.30 ರಿಂದ ಶ್ರೀಭೂತಬಲಿ, ರಾತ್ರಿ 8 ರಿಂದ ನಡುದೀಪೋತ್ಸವ, ಫೆ.16 ರಂದು ಬೆಳಿಗ್ಗೆ 9.30 ರಿಂದ ಶ್ರೀಭೂತಬಲಿ, ರಾತ್ರಿ 8 ರಿಂದ ಬೆಡಿ ಉತ್ಸವ, ರಾತ್ರಿ 10.30 ರಿಂದ ಶ|ರೀಮಠದ ಮುಂಭಾಗದಲ್ಲಿ ಪುಷ್ಪ ರಥೋತ್ಸವ, ನೂತನ ಮಹಾದ್ವಾರದ ಸಮರ್ಪಣೆ, ನೂತನ ದೇವರಕಟ್ಟೆ ಸಮರ್ಪಣೆ, ನೂತನ ಉತ್ಸವ ಮೂರ್ತಿಯ ಸಮರ್ಪಣೆ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ 9.30 ರಿಂದ ಶಯನೋದ್ಘಾಟನೆ, ಮಂಗಳಾಭಿಷೇಕ, ರಾತ್ರಿ 9.30 ರಿಂದ ಶ್ರೀಮಠದ ಮುಂಭಾಗದಲ್ಲಿ ನೃತ್ಯೋತ್ಸವ, ತೆಪ್ಪೋತ್ಸವ, ಅವಭೃತ ಸ್ನಾನ, ಪ್ರಸಾದ ವಿತರಣೆ, ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ವಾರ್ಷಿಕ ಉತ್ಸವದ ದಿನಗಳಲ್ಲಿ ಸಂಜೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳೂ ನಡೆಯಲಿದೆ.
ನಾಳೆಯಿಂದ ಎಡನೀರು ವಿಷ್ಣುಮಂಗಲ ಕ್ಷೇತ್ರ ವಾರ್ಷಿಕೋತ್ಸವ
0
ಫೆಬ್ರವರಿ 12, 2023