ಕುಂಬಳೆ: ಭಾರತೀಯ ಜನತಾ ಪಕ್ಷ ಕುಂಬಳೆ ಮಂಡಲ ಬೂತ್ ನಂಬರ್ 180 ಸಮಿತಿ ನೇತೃತ್ವದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಸಂಸ್ಮರಣೆ ಕಾರ್ಯಕ್ರಮ ಮುಖಾರಿಕಂಡ ವೀರಹನುಮಾನ್ ಕ್ಲಬ್ಬಿನಲ್ಲಿ ನಡೆಯಿತು. ಬೂತ್ ಅಧ್ಯಕ್ಷ ನಾರಾಯಣ ಎಂ ಎನ್ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ದೀನ್ ದಯಾಳ್ ಜಿ ಯವರ ಜೀವನದ ಬಗ್ಗೆ ವಿವರಿಸಿದರು. ಉದಯ ಮುಖಾರಿಕಂಡ, ಹರೀಶ್ ನಾಯ್ಕ, ಯತೀಶ್ ಮತ್ತು ಕಾರ್ಯಕರ್ತರು ಭಾಗವಹಿಸಿದರು.
ಮುಕಾರಿಕಂಡದಲ್ಲಿ ದೀನ್ ದಯಾಳ್ ಸಂಸ್ಮರಣೆ
0
ಫೆಬ್ರವರಿ 16, 2023
Tags