ಬದಿಯಡ್ಕ: ಸಮಗ್ರ ಶಿಕ್ಷಾ ಕೇರಳ ಇದರ ವತಿಯಿಂದ `ಇಲಾ' ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗೆ ಏಕದಿನ ತರಬೇತಿ ಶಿಬಿರ ನಾರಂಪಾಡಿ ಫಾತಿಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರಗಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್. ಪ್ರೆಸಿಲ್ಲ ಡಿ ಕುನ್ಹಾ ಅಧ್ಯಕ್ಷತೆ ವಹಿಸಿದ್ದರು. ಬಿ.ಆರ್.ಸಿ ತರಬೇತುದಾರೆ ಸುಪ್ರಿಯಾ ಟೀಚರ್ ಶಿಬಿರವನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಸಿದ್ಧ ನಾಟಕಕಾರ, ತರಬೇತಿದಾರ ಸುಭಾಸ್ ವನಶ್ರೀ, ಜಿ.ವಿ.ಎಚ್.ಎಸ್.ಶಾಲೆಯ ನಿವೃತ್ತ ಅಧ್ಯಾಪಕ ಕೃಷ್ಣೋಜಿ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಏಕದಿನ ತರಬೇತಿ ಶಿಬಿರ
0
ಫೆಬ್ರವರಿ 10, 2023
Tags