ತಿರುವನಂತಪುರಂ: ಕೇಂದ್ರ ಸಚಿವ ವಿ. ಮುರಳೀಧರನ್ ಅವರ ತಿರುವನಂತಪುರದಲ್ಲಿರುವ ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ನಡೆದಿದೆ. ಮನೆಯ ಕಿಟಕಿ ಒಡೆದು ಹಾಕಲಾಗಿದೆ.
ನೆಲದ ಮೇಲೆ ಮತ್ತು ಗೋಡೆಗಳಲ್ಲಿ ರಕ್ತದ ಕಲೆಯಿದೆ. ಬೆಳಿಗ್ಗೆ ಮನೆಗೆ ಬಂದ ಕೆಲಸದಾಕೆ ರಕ್ತದ ಕಲೆಯನ್ನು ಗುರುತಿಸಿದರು. ಕಿಟಿಕಿಯ ಗಾಜು ಒಡೆದು ದಾಳಿಕೋರರ ಕೈಗೆ ಗಾಯಗೊಂಡು ರಕ್ತಸ್ರಾವವಾಗಿದೆ ಎಂದು ಅಂದಾಜಿಸಲಾಗಿದೆ. ಟೆರೇಸ್‍ಗೆ ತೆರಳುವ ಮೆಟ್ಟಿಲುಗಳ ಮೇಲೂ ರಕ್ತದ ಕಲೆಗಳಿವೆ. ಘಟನಾ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ಇಲಾಖೆ ಆಗಮಿಸಿದ್ದು, ವೈದ್ಯಕೀಯ ಕಾಲೇಜು ಠಾಣಾ ಪೋಲೀಸರು ಶೋಧ ಆರಂಭಿಸಿದ್ದಾರೆ. ಮನೆಯಲ್ಲಿ ಯಾರೂ ಇದ್ದಿರಲಿಲ್ಲ.
ಸಚಿವರು ತಿರುವನಂತಪುರಕ್ಕೆ ಆಗಮಿಸಿದಾಗ ಮಾತ್ರ ಈ ಮನೆಯಲ್ಲಿ ಇರುತ್ತಾರೆ. ಮನೆ ಹಿಂಭಾಗದಲ್ಲಿ ಕೇಂದ್ರ ಸಚಿವರ ಕಚೇರಿಯೂ ಕಾರ್ಯನಿರ್ವಹಿಸುತ್ತಿದೆ.
ಕೇಂದ್ರ ಸಚಿವ ವಿ. ಮುರಳೀಧರನ್ ಮನೆ ಮೇಲೆ ದಾಳಿ: ಕಿಟಕಿಯ ಗಾಜು ಒಡೆದು ಹಾನಿ
0
ಫೆಬ್ರವರಿ 09, 2023