ಬದಿಯಡ್ಕ: ಕೇರಳ ಸ್ಟೇಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಸೋಸಿಯೇಷನ್ ಕಳೆದ ಜನವರಿಯಲ್ಲಿ ನಡೆಸಿದ 2022-23ನೇ ಸಾಲಿನ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ಸ್‍ಗಳಾದ ಮನ್ವಿತ್ ಕೃಷ್ಣ ಎನ್, ಅಕ್ಷಯ ವಿ, ಶಶಾಂಕ ಎಮ್, ಕೆ ದುರ್ಗಾಶಂಕರ ಅಡಿಗ, ಅಮೋಘ ಕೃಷ್ಣ ಎಮ್, ಶ್ರೀಜಿಷ್ಣು ಪಿ ಎಸ್, ನಿಶ್ಚಿತ್ ರಾಜ್ ಉತ್ತೀರ್ಣರಾಗಿ ರಾಜ್ಯಪುರಸ್ಕಾರಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ. ಇವರನ್ನು ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ ರಕ್ಷಕ ಸಂಘ, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಅಭಿನಂದಿಸಿದೆ.
ನೀರ್ಚಾಲು ಶಾಲೆಯ ವಿದ್ಯಾರ್ಥಿಗಳಿಗೆ ಸ್ಕೌಟ್ ರಾಜ್ಯ ಪುರಸ್ಕಾರ
0
ಫೆಬ್ರವರಿ 24, 2023
Tags