ಬದಿಯಡ್ಕ: ಇತ್ತೀಚೆಗೆ ಎರ್ನಾಕುಳಂ ಜಿಲ್ಲೆಯ ಜಿಎಚ್‍ಎಸ್ ಎಡಪ್ಪಳ್ಳಿ ಶಾಲೆಯಲ್ಲಿ ಜರಗಿದ ರಾಜ್ಯಮಟ್ಟದ ಭಾಸ್ಕರಾಚಾರ್ಯ ಗಣಿತ ಸೆಮಿನಾರ್ ಸ್ಪರ್ಧೆಯಲ್ಲಿ ಪೆರಡಾಲ ನವಜೀವನ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಚಿತ್ತರಂಜನ್ ಕೆ. ಭಾಗವಹಿಸಿ `ಎ' ಗ್ರೇಡ್ ಪಡೆದಿರುತ್ತಾನೆ. ಇದೇ ಶಾಲೆಯಲ್ಲಿ ಅಧ್ಯಾಪಿಕೆಯಾಗಿರುವ ಜ್ಯೋತ್ಸ್ನಾ .ಎಂ. ಹಾಗೂ ಹರೀಶ್ ಕುಮಾರ್ ದಂಪತಿಗಳ ಪುತ್ರನಾಗಿದ್ದು ಈ ಹಿಂದೆ ರಾಜ್ಯಮಟ್ಟದ ಯಕ್ಷಗಾನ ಸ್ಪರ್ಧೆಯಲ್ಲಿಯೂ ಎ ಗ್ರೇಡ್‍ನ್ನು ಪಡೆದಿರುತ್ತಾನೆ. ಈತನ ಸಾಧನೆಗೆ ಶಾಲಾ ವ್ಯವಸ್ಥಾಪಕ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕವೃಂದದವರು ಅಭಿನಂದಿಸಿದ್ದಾರೆ.
ರಾಜ್ಯಮಟ್ಟದಲ್ಲಿ ಚಿತ್ತರಂಜನ್‍ಗೆ `ಎ'ಗ್ರೇಡ್
0
ಫೆಬ್ರವರಿ 14, 2023