ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪ್ರತಿಷ್ಠಾ ವರ್ಧಂತ್ಯುತ್ಸವ ಅಂಗವಾಗಿ ನಿನ್ನೆ ಸೂರ್ಯಾಸ್ತ ಸಂದರ್ಭ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈಯುವುದರೊಂದಿಗೆ ಏಕಾಹ ಭಜನೋತ್ಸವ ಶುಭಾರಂಭಗೊಂಡಿತು. ಇಂದು ಸೂರ್ಯಾಸ್ತದವರೆಗೆ ವಿವಿಧ ಭಜನಾ ತಂಡಗಳು ಭಜನಾಸೇವೆ ನಡೆಸಿ ಕೊಡುವುದರ ಮೂಲಕ ಭಜನೋತ್ಸವ ಸಂಪನ್ನಗೊಳ್ಳಲಿದೆ.
ನಾಳೆ(ಫೆ.22) ಪ್ರತಿಷ್ಠಾ ವರ್ಧಂತ್ಯುತ್ಸವದ ಧಾರ್ಮಿಕ ಕಾರ್ಯಕ್ರಮಗಳು, ಚಂಡಿಕಾ ಯಾಗ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೂ ನಡೆಯಲಿವೆ.
ಕೊಂಡೆವೂರಿನಲ್ಲಿ ಏಕಾಹ ಭಜನೋತ್ಸವಕ್ಕೆ ಚಾಲನೆ
0
ಫೆಬ್ರವರಿ 20, 2023