ಕುಂಬಳೆ: ಕಿದೂರು ದಂಡೆಗೋಳಿಯ ಅಮೆತ್ತೋಡು ಶ್ರೀ ಧೂಮಾವತೀ ದೈವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ನೇಮ ಪೆ. 9ಹಾಗೂ 10ರಂದು ಜರುಗಲಿದೆ. ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
9ರಂದು ಬೆಳಗ್ಗೆ ಗಣಪತಿ ಹವನ, ಪ್ರತಿಷ್ಠಾ ದಿನಾಚರಣೆ ಅಂಗವಾಗಿ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಹರಿಸೇವೆ, ಸಂಜೆ 6ಕ್ಕೆ ಬಜನೆ, ರಾತ್ರಿ 8ಕ್ಕೆ ಕಲ್ಲಾಲ್ತ ಗುಳಿಗ ಕೋಲ, ಹಿರಿಯರಿಗೆ ಬಡಿಸುವ ಕಾರ್ಯಕ್ರಮ ನಡೆಯುವುದು. 10ರಂದು ಬೆಳಗ್ಗೆ ಶ್ರೀ ಧೂಮಾವತೀ ದೈವದ ಧರ್ಮನೇಮ, ಸಂಜೆ 5ಕ್ಕೆ ಕೊರತಿ ದೈವದ ಕೋಲ, ರಾತ್ರಿ 8ಕ್ಕೆ ಪರಿವಾರ ದೈವಗಳ ತಂಬಿಲ ಸೇವೆ ನಡೆಯಲಿರುವುದು.
ಅಮೆತ್ತೋಡು ದೈವಸ್ಥಾನದಲ್ಲಿ ಇಂದಿನಿಂದ ಪ್ರತಿಷ್ಠಾ ದಿನ, ವಾರ್ಷಿಕ ನೇಮ
0
ಫೆಬ್ರವರಿ 08, 2023