ಕೋಝಿಕ್ಕೋಡ್: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ನಟ ಮೋಹನ್ ಲಾಲ್ ಜೊತೆಗಿದ್ದು ಮಾತನಾಡುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಡಿಸ್ನಿ ಇಂಡಿಯಾ ಅಧ್ಯಕ್ಷ ಕೆ. ಮಾಧವನ್ ಅವರ ಪುತ್ರನ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಪಿಣರಾಯಿ ವಿಜಯನ್ ಮತ್ತು ಮೋಹನ್ ಲಾಲ್ ಪರಸ್ಪರ ಭೇಟಿಯಾದರು. ಇವರಿಬ್ಬರ ನಡುವಿನ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‍ಗೆ ಒಳಗಾಗಿದೆ. ಇದಕ್ಕೆ ಕಾರಣ ಮೋಹನ್ ಲಾಲ್ ಧರಿಸಿರುವ ಕಪ್ಪು ಬಣ್ಣದ ಕುರ್ತಾ. ಮುಖ್ಯಮಂತ್ರಿಗಳ ಸುರಕ್ಷತೆಗೂ ಮುನ್ನವೇ ಕಪ್ಪು ವಸ್ತ್ರಗಳನ್ನು ನಿಷೇಧ ಹೇರಿರುವ ಪ್ರಕ್ರಿಯೆ ಸೃಷ್ಟಿಯಾಗಿರುವಾಗಲೇ ಕಪ್ಪುಬಟ್ಟೆ ಧರಿಸಿದ್ದ ಮೋಹನ್ ಲಾಲ್ ಅವರೊಮದಿಗಿನ ಕುಶಲೋಪರಿ ಚರ್ಚೆಗೊಳಗಾಗಿದೆ.
ಸರ್ಕಾರಿ ಕಲಾ ಕಾಲೇಜಿನಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳ ಕಪ್ಪು ಮುಖವಾಡಗಳನ್ನು ಪೆÇಲೀಸರು ತೆಗೆಸಿದರು. ಆದರೆ ಅದೇ ವೇಳೆಗೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಝ್ ಕೂಡ ಕಪ್ಪು ಬಟ್ಟೆ ಧರಿಸಿ ಆಗಮಿಸಿದ್ದರು. ಇದೂ ಕೂಡ ಟ್ರೋಲ್‍ಗಳಲ್ಲಿ ಸ್ಥಾನ ಪಡೆದಿದೆ. ಅಳಿಯ ಕಪ್ಪು ಬಟ್ಟೆ ಧರಿಸಬಹುದೇ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಆಗಿದೆ. ರಿಯಾಜ್ ಮತ್ತು ಮೋಹನ್ ಲಾಲ್ ಅವರ ಚಿತ್ರಗಳನ್ನು ಬಳಸಿ ಟ್ರೋಲ್‍ಗಳು ಮುಖ್ಯಮಂತ್ರಿಯನ್ನು ಟೀಕಿಸುತ್ತಿದ್ದಾರೆ.
ಕೋಝಿಕ್ಕೋಡ್‍ನ ಐμÁರಾಮಿ ಹೋಟೆಲ್‍ನಲ್ಲಿ ಕೆ.ಮಾಧವನ್ ಪುತ್ರನ ಮದುವೆ ಸಂಭ್ರಮಾಚರಣೆ ನಡೆದಿದೆ. ಕೆಲ ದಿನಗಳ ಹಿಂದೆ ಗೌತಮ್ ಮದುವೆಯಾಗಿದ್ದರು. ಆರತಕ್ಷತೆ ಸಮಾರಂಭದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಅನೇಕರು ಪಾಲ್ಗೊಂಡಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲೂ ಗಮನ ಸೆಳೆಯುತ್ತಿವೆ. ಮಾಮುಕೋಯ, ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೈ, ಯೂಸಫಲಿ, ಸಚಿವ ರಿಯಾಜ್, ಮುಲ್ಲಪಲ್ಲಿ, ಪಿ.ಕೆ.ಶ್ರೀಮತಿ, ಇ.ಪಿ.ಜಯರಾಜನ್, ಲಿಜಿ ಪ್ರಿಯದರ್ಶನ್, ಆಶಾ ಶರತ್, ಸುಜಾತಾ, ಚಿಪ್ಪಿ, ಸೀತಾರಾಂ ಎಚೂರಿ, ಜಗದೀಶ್, ಪಶ್ಚಿಮ ಬಂಗಾಳದ ರಾಜ್ಯಪಾಲ ಆನಂದ ಬೋಸ್ ಸೇರಿದಂತೆ ಹಲವು ಗಣ್ಯರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.
'ಓ…ಲಾಲೆಟ್ಟಾ……: ಮುಖ್ಯಮಂತ್ರಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕಪ್ಪು ಕುರ್ತಾ ಧರಿಸಿದ ಮೋಹನ್ ಲಾಲ್; ಚಿತ್ರ ವೈರಲ್
0
ಫೆಬ್ರವರಿ 20, 2023