ತ್ರಿಶೂರ್: ಸಂಚರಿಸುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದರಿಂದ ಅನಾಹುತ ತಪ್ಪಿದೆ.
ನಿಲಂಬೂರಿನಿಂದ ಕೊಟ್ಟಾಯಂಗೆ ಹೊರಟಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡಿದೆ. ಇಂದು ಮುತುವರ ಎಂಬಲ್ಲಿ 11.10ಕ್ಕೆ ಈ ಘಟನೆ ನಡೆದಿದೆ.
ನಿಲಂಬೂರು ಡಿಪೆÇೀದಲ್ಲಿ ಕೆ.ಎಸ್.ಆರ್.ಟಿ.ಸಿ ಸೂಪರ್ ಫಾಸ್ಟ್ ಬಸ್ ಂ1244 ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಸಜೀವ್ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹೊರಕ್ಕೆ ಕರೆತಂದು ಬಸ್ ನಲ್ಲಿಟ್ಟಿದ್ದ ಅಗ್ನಿಶಾಮಕ ಯಂತ್ರ ಬಳಸಿ ಬೆಂಕಿ ನಂದಿಸಿದ್ದಾರೆ. ತುರ್ತು ಸಹಾಯಕ್ಕಾಗಿ ಅಗ್ನಿಶಾಮಕ ದಳವನ್ನೂ ಸಂಪರ್ಕಿಸಲಾಯಿತು. ತ್ರಿಶೂರ್‍ನಿಂದ 2 ಘಟಕಗಳ ಅಗ್ನಿಶಾಮಕ ವಾಹನಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ವಾಹನದ ಬ್ಯಾಟರಿ ತೆಗೆದು ನೀರು ಪಂಪ್ ಮಾಡಿ ವಾಹನವನ್ನು ಸ್ಪೋಟಿಸದ|ಂತೆ ತಡೆದರು.
ಚಾಲಕನ ಸೀಟಿನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ಸಿನಲ್ಲಿ 30 ಮಂದಿ ಪ್ರಯಾಣಿಕರಿದ್ದರು. ಇಂಜಿನ್ ಕಡೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬೆಂಕಿಗೆ ಪ್ರಾಥಮಿಕ ಕಾರಣ ಶಾರ್ಟ್ ಸಕ್ರ್ಯೂಟ್ ಎನ್ನಲಾಗಿದೆ.
ತ್ರಿಶೂರ್ ನಲ್ಲಿ ಕೆಎಸ್ ಆರ್ ಟಿಸಿ ಬಸ್ ಗೆ ಬೆಂಕಿ; ಚಾಲಕನ ಸಕಾಲಿಕ ಮಧ್ಯಪ್ರವೇಶದಿಂದ ಭಾರೀ ಅನಾಹುತದಿಂದ ಪಾರು: ಪ್ರಯಾಣಿಕರು ಸುರಕ್ಷಿತ
0
ಫೆಬ್ರವರಿ 12, 2023