ಕುಂಬಳೆ: ಪೆರುವಾಡಿನಲ್ಲಿ ಪಂಜಿಕಂಡ ಸೋಡೇರಣ್ಣ ಕುಟುಂಬಸ್ಥರ ತರವಾಡಿನಲ್ಲಿ ಮಾ. 7ರಿಂದ 10ರ ವರೆಗೆ ನಡೆಯಲಿರುವ ಶ್ರೀ ಧೂಮಾವತಿ ಬಂಟ, ವಿಷ್ಣುಮೂರ್ತಿ, ಕೊರತಿಯಮ್ಮ, ನಾಗ, ಗುಳಿಗ ಪರಿವಾರ ದೈವಗಳ ಪೀಠ ಪ್ರತಿಷ್ಠ, ಬ್ರಹ್ಮ ಕಲಶಾಭಿಷೇಕ, ನೂತನ ತರವಾಡು ಮನೆಯ ಗ್ರಹಪ್ರವೇಶ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕುಂಬಳೆ ಸೀಮೆಯ ಪ್ರಸಿದ್ಧ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಾಲಯದ ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಗಟ್ಟಿ ಮನ್ನಿಪಾಡಿ, ಕಾರ್ಯದರ್ಶಿಗಳಾದ ಜಲಜಾಕ್ಷಿ ಗಟ್ಟಿ ಪೆÇಯ್ಯ ಕಂಡ, ಸುಕುಮಾರ ಗಟ್ಟಿ, ಉಪಾಧ್ಯಕ್ಷರಾದ, ತ್ಯಾಂಪಗಟ್ಟಿ ಹಾಗೂ ಕೃಷ್ಣಗಟ್ಟಿ ಕುಂಬಳೆ ಹಾಗೂ ಸೇವಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಗಟ್ಟಿ ಪಂಜಿಕಂಡ, ರೇವತಿ ಗಟ್ಟಿ ಬಳ್ಳೂರು, ಮಹೇಶ್ ಗಟ್ಟಿ ಕೋಟೆಕಾರು ಉಪಸ್ಥಿತರಿದ್ದರು.
ಪೆರುವಾಡಿನಲ್ಲಿ ತರವಾಡುಮನೆ ಗೃಹಪ್ರವೇಶ, ನೇಮ: ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 16, 2023