ಉಪ್ಪಳ: ಇತ್ತೀಚೆಗೆ ಮಂಗಲ್ಪಾಡಿ ಪೆರಿಂಗಡಿಯ ಶ್ರೀ ಶಾಸ್ತಾರೇಶ್ವರ ನಾಗಬ್ರಹ್ಮ ದೇವಸ್ಥಾನ್ರದ ಪ್ರತಿಷ್ಠಾವರ್ಧಂತಿ ಸಂದರ್ಭ ಜರಗಿದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯ, ಪ್ರಸಂಗಕರ್ತ, ಕವಿ,ಸಾಹಿತಿ ಯೋಗೀಶ ರಾವ್ ಚಿಗುರುಪಾದೆ ಯವರಿಗೆ ಯಕ್ಷಕಲಾಭಾರತಿ ಮಂಗಲ್ಪಾಡಿ ವತಿಯಿಂದ ಯಕ್ಷಕಲಾ ಭಾರತಿಯ ಸ್ಥಾಪಕಾಧ್ಯಕ್ಷ, ಹಿರಿಯ ಯಕ್ಷಗಾನ ಗುರುಗಳೂ, ಯಕ್ಷಗಾನ ಅಕಾಡೆಮಿ ಯಕ್ಷಸಿರಿ ಪ್ರಶಸ್ತಿ ಪುರಸ್ಕøತರೂ ಆದ ರಾಮ ಸಾಲಿಯಾನ್ ಮಂಗಲ್ಪಾಡಿ ಅವರ ನೇತೃತ್ವದಲ್ಲಿ “ಯಕ್ಷಕಲಾನಿಧಿ” ಬಿರುದು ನೀಡಿ ನೀಡಿ ಗೌರವಿಸಲಾಯಿತು.
ಯಕ್ಷಕಲಾಭಾರತಿ ಮಂಗಲ್ಪಾಡಿ ಇದರ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಮೀನಾರು ಆಭಿನಂದನಾ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಡಾ.ಸುರೇಶ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣ ಆನುವಂಶಿಕ ಅರ್ಚಕರು ಶ್ರೀಕ್ಷೇತ್ರ ಕಟೀಲು, ಹಿರಿಯ ವೈದ್ಯರೂ ಸಮಾಜ ಸೇವಕ, ಧಾರ್ಮಿಕ ಮುಂದಾಳು ಆಗಿರುವ ಡಾ.ಕಯ್ಯಾರು ಪ್ರಭಾಕರ ಹೊಳ್ಳ, ಕ್ಷೇತ್ರದ ಆಡಳಿತ ಮೊಕ್ತೇಸರ ಯಂ.ಜಿ. ಆಶೋಕ ಹೊಳ್ಳ ಪೆರಿಂಗಡಿ ಉಪಸ್ಥಿತರಿದ್ದರು.
ಯೋಗೀಶ ರಾವ್ ಚಿಗುರುಪಾದೆ ಯವರಿಗೆ ಯಕ್ಷಕಲಾನಿಧಿ ಪುರಸ್ಕಾರ
0
ಫೆಬ್ರವರಿ 25, 2023