ಕಾಸರಗೋಡು: ಕಿಲಾ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಂಟಿಯಾಗಿ ಕೋಟ್ಟಪುರ ಪೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ರಾಷ್ಟ್ರೀಯ ಚಂಡಮಾರುತ ಅಪಾಯ ನಿರ್ವಹಣೆ ಯೋಜನೆಯ ಭಾಗವಾಗಿ ಸುರಕ್ಷತಾ ತರಬೇತಿ ಕಾರ್ಯಕ್ರಮವನ್ನು ನಡೆಸಿತು. ನೀಲೇಶ್ವರ ನಗರಸಭೆ ವಾರ್ಡ್ ಕೌನ್ಸಿಲರ್ ರಫೀಕ್ ಕೊಟ್ಟಪುರ ಕಾರ್ಯಕ್ರಮ ಉದ್ಘಾಟಿಸಿದರು. ಕಿಲಾ ಜಿಲ್ಲಾ ಸಂಚಾಲಕ ಅಜಯ್ ಪನಾಯಾಲ್ ಅಧ್ಯಕ್ಷತೆ ವಹಿಸಿದ್ದರು.
21ನೇ ವಾರ್ಡ್ ಕೌನ್ಸಿಲರ್ ಶಂಸುದ್ದೀನ್ ಅರಿಂಚಿರ ಮುಖ್ಯ ಅತಿಥಿಯಾಗಿದ್ದರು. ಎಲ್‍ಎಸ್‍ಜಿ ಡಿಎಂ ಯೋಜನಾ ಸಂಯೋಜಕ ಅಹಮದ್ ಶಫೀಕ್ ಕಿಲಾ ಆರ್‍ಪಿಗಳಾದ ಬಾಲಚಂದ್ರನ್ ಮಾಸ್ತರ್, ಮುಕುಂದನ್ ಮಾಸ್ತರ್, ರಾಘವನ್ ಮಾಸ್ತರ್ ವಿವಿಧ ವಿಷಯಗಳ ಕುರಿತು ತರಗತಿ ನಡೆಸಿದರು. ಮುಖ್ಯಶಿಕ್ಷಕ ಎನ್.ಚಂದ್ರಶೇಖರನ್ ಸ್ವಾಗತಿಸಿ, ಆರ್‍ಜಿಎಸ್‍ಎ ಸಂಯೋಜಕಿ ಆರತಿ ಶಂಕರ್ ವಂದಿಸಿದರು.
ಸುರಕ್ಷತಾ ತರಬೇತಿ ಕಾರ್ಯಕ್ರಮ
0
ಫೆಬ್ರವರಿ 10, 2023