ಪೆರ್ಲ: ರಾಜ್ಯ ಮಟ್ಟದ ಹಾಲುತ್ಪಾದಕರ ಸಂಗಮದಲ್ಲಿ ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷರೂ,ಪ್ರಗತಿಪರ ಕೃಷಿಕರಾದ ಬಾಲಕೃಷ್ಣ ಎನ್ ಅವರಿಗೆ ಕ್ಷೀರ ಸಹಕಾರಿ ಪ್ರಶಸ್ತಿ ಪ್ರದಾನಿಸಲಾಯಿತು.
ತ್ರಿಶ್ಯೂರ್ ಜಿಲ್ಲೆಯ ಮಣ್ಣೋತ್ತಿಯಲ್ಲಿ ಫೆಬ್ರವರಿ 10 ರಿಂದ 15 ವರೆಗೆ ನಡೆದ ರಾಜ್ಯ ಮಟ್ಟದ ಕ್ಷೀರ ಕೃಷಿಕರ ಸಂಗಮದಲ್ಲಿ ಕ್ಷೀರ ಅಭಿವೃದ್ಧಿ ಇಲಾಖೆ ಮತ್ತು ಮೃಗ ಸಂರಕ್ಷಣೆ ಇಲಾಖೆ ಸಚಿವೆ ಚಿಂಜುರಾಣಿರವರ ಅಧ್ಯಕ್ಷತೆಯಲ್ಲಿ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗ ವಿಭಾಗದಲ್ಲಿ ಗರಿಷ್ಠ ಹಾಲು ಸಂಘಕ್ಕೆ ನೀಡಿದ ಹಾಲುತ್ಪಾದಕರಿಗಿರುವ ಕ್ಷೀರ ಸಹಕಾರಿ ಅವಾರ್ಡ್ ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷ ಬಾಲಕೃಷ್ಣ ಎನ್ ಇವರಿಗೆ ವಿತರಿಸಿದರು. ಕಳೆದ 2021-22 ನೇ ವರ್ಷದಲ್ಲಿ ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘಕ್ಕೆ ಗರಿಷ್ಠ ಪ್ರಮಾಣದಲ್ಲಿ ಹಾಲು ನೀಡಿ ಬ್ಲೋಕ್ ಪಂಚಾಯತ್ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಪಡೆದು ಅರ್ಹವಾಗಿ ರಾಜ್ಯ ಮಟ್ಟದ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.ಪಡ್ರೆ ವಾಣೀನಗರ ನೆಕ್ಕರೆಮಜಲು ಚೋಮ ನಾಯ್ಕ್ ಮತ್ತು ಸುಂದರಿ ದಂಪತಿ ಪುತ್ರ.
ಪಡ್ರೆ ಕ್ಷೀರೋತ್ಪಾದಕ ಸಹಕರಣ ಸಂಘದ ಅಧ್ಯಕ್ಷ,ಪ್ರಗತಿಪರ ಕೃಷಿಕ ಬಾಲಕೃಷ್ಣ ಎನ್ ಗೆ ರಾಜ್ಯ ಮಟ್ಟದ ಹಾಲೂತ್ಪಾದ ಪ್ರಶಸ್ತಿ ಪ್ರದಾನ
0
ಫೆಬ್ರವರಿ 16, 2023
Tags