ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಹಾಗೂ ಕುಟುಂಬಶ್ರೀ ಸಿಡಿಎಸ್ ಬಾಲಸಭಾ ಮತ್ತು ಜೆಂಡರ್ ರಿಸೋರ್ಸ್ ಸೆಂಟರ್ ನೇತೃತ್ವದಲ್ಲಿ "ಚಿಲಿಪಿಲಿ" ಎಂಬ ಸಾಂಸ್ಕøತಿಕ ವಿಕಸನ ಏಕದಿನ ಶಿಬಿರ ಎಣ್ಮಕಜೆ ಪಂಚಾಯತಿ ಸಭಾಂಗಣದಲ್ಲಿ ಜರಗಿತು. ಕುಟುಂಬಶ್ರೀ ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ ಅವರ ಅಧ್ಯಕ್ಷತೆಯಲ್ಲಿ ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿ, "ಕುಟುಂಬಶ್ರೀ ಮೂಲಕ ಸಬಲೀಕರಣ ಯೋಜನೆ ಕೈಗೊಳ್ಳಲಾಗುತ್ತಿದ್ದು ಬಾಲ್ಯ ಕಾಲದಿಂದಲೇ ಪ್ರತಿಭೆಗಳಿಗೆ ವ್ಯಕ್ತಿತ್ವ ವಿಕಸನ ಆಗುವ ರೀತಿಯಲ್ಲಿ ನೀಡುವ ಪೆÇ್ರೀತ್ಸಾಹ ಅನನ್ಯವಾಗಿದೆ. ಇದಕ್ಕೆ ಪಂಚಾಯತಿ ಹಲವಾರು ಪದ್ಧತಿಗಳನ್ನು ಮುಂದಿನ ಹಂತದಲ್ಲಿ ಮೀಸಲಿಡಲಿದೆ ಎಂದರು.
ಗ್ರಾ.ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಸ್ವರ್ಗ,ಜೆಂಡರ್ ರಿಸೋರ್ಸ್ ಸೆಂಟರ್ ನ ಕೌನ್ಸಿಲರ್ ಪ್ರಸೀದಾ ಮಾತನಾಡಿದರು. ಸಿಡಿಎಸ್ ಸದಸ್ಯರಾದ ಸರಸ್ವತಿ,ಚಂದ್ರಾವತಿ, ಸಿಸಿಲಿಯಾ, ಪುμÁ್ಪಲತಾ,ಕುಟುಂಬಶ್ರೀ ಲೆಕ್ಕ ಪರಿಶೋಧಕಿ ಸುನೀತಾ, ಆಶಾ ವರ್ಕರ್ ಸತ್ಯಕುಮಾರಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಎಡಿಎಸ್ ಸದಸ್ಯೆ ಉದಯ ಕುಮಾರಿ ಸ್ವಾಗತಿಸಿದರು. ಬಳಿಕ ರಂಗಕರ್ಮಿ,ಶಿಕ್ಷಕ ಉದಯ ಸಾರಂಗ್ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಕೌಶಲ್ಯಗಳ ಬಗ್ಗೆ ತರಗತಿ ನಡೆಸಿದರು.
ಎಣ್ಮಕಜೆ ಕುಟುಂಬಶ್ರೀ ಬಾಲಸಭಾ ಮಕ್ಕಳಿಗೆ "ಚಿಲಿಪಿಲಿ" ಏಕದಿನ ಶಿಬಿರ
0
ಫೆಬ್ರವರಿ 12, 2023