ಕುಂಬಳೆ: ಶಿರಿಯಾ ಸಮೀಪದ ಮುಟ್ಟಂನ ಮಖ್ದುಮಿಯ್ಯ ಎಜುಕೇಶನಲ್ ಸೆಂಟರ್ ವತಿಯಿಂದ ‘ಜ್ಞಾನವೇ ಬೆಳಕು’ ಎಂಬ ವಿಷಯದ ಕುರಿತು ದಶಮಾನೋತ್ಸವದ ಸಮ್ಮೇಳನ ಶನಿವಾರ ಸಂಪನ್ನಗೊಂಡಿತು. ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಅಲ್ಹಾದಿಯವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ನಡೆದ ಹಳೆ ವಿದ್ಯಾರ್ಥಿ ಕೂಟವನ್ನು ಮುಹಮ್ಮದ್ ಅಲಿ ಅಹ್ಸನಿ ಉಪ್ಪಳ ಉದ್ಘಾಟಿಸಿದರು. ಮಧ್ಯಾಹ್ನ ನಡೆದ ಮುತಅಲ್ಲಿಂ ಶೃಂಗಸಭೆಯ ಪ್ರಾರ್ಥನೆಯ ಅಧ್ಯಕ್ಷತೆಯನ್ನು ಸೈಯದ್ ಹಸನುಲ್ ಅಹ್ದಲ್ ತಂಙಳ್ ಮುಹಿಮ್ಮತ್ ವಹಿಸಿದ್ದರು. ಸೈಯದ್ ಇಂಬಿಚ್ಚಿಕೋಯ ತಂಙಳ್ ಬಾಯಾರ್ ಉದ್ಘಾಟಿಸಿದರು. ಅನಸ್ ಅಮಾನಿ ಪುಷ್ಪಗಿರಿ ವಿಷಯ ಮಂಡಿಸಿದರು. ನಂತರ ಅಪರಾಹ್ನ 3 ಕ್ಕೆ ಸಂಶೋಧನಾ ಕೇಂದ್ರ ಮಖ್ದುಮಿಯ್ಯ ಅಧ್ಯಕ್ಷ ಸೈಯದ್ ಫಝಲ್ ಕೋಯಮ್ಮ ಅಲ್ಬುಖಾರಿ ಕೂರ ತಂಙಳ್ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು. ಕೇರಳ ಮುಸ್ಲಿಂ ಜಮಾತ್ ಜಿಲ್ಲಾಧ್ಯಕ್ಷ ಬಿ.ಎಸ್.ಅಬ್ದುಲ್ಲ ಕುಂಞÂ್ಞ ಫೈಝಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಸಾಂಸ್ಕøತಿಕ ಸಮ್ಮೇಳನವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು.
ಮುಹಮ್ಮದ್ ಅಲಿ ಸಖಾಫಿ ತೃಕರಿಪುರ, ಸುಲೈಮಾನ್ ತಂಙಳ್ ಕರಿವೆಳ್ಳೂರು ವಿಷಯ ಮಂಡಿಸಿದರು. ಸಂಜೆ ನಡೆದ ಸಮಾರೋಪ ಸಾರ್ವಜನಿಕ ಸಭೆಯನ್ನು ಮಖ್ದುಮಿಯ್ಯ ಅಧ್ಯಕ್ಷ ಖುರತುಸಾದತ್ ಸೈಯದ್ ಫಝಲಕೋಯಮ್ಮ ಅಲ್ಬುಖಾರಿ ಅಧ್ಯಕ್ಷತೆಯಲ್ಲಿ ಸೈಯದ್ ಶಿಹಾಬುದ್ದೀನ್ ತಂಙಳ್ ಮುತ್ತನ್ನೂರು ಉದ್ಘಾಟಿಸಿದರು. ಸಯ್ಯದ್ ಅತ್ವಾವುಲ್ಲಾ ತಂಙಳ್ ಪ್ರಾರ್ಥನೆ ನಡೆಸಿದರು. ಮಾಣಿಕೋತ್ ಅಬ್ದುಲ್ಲಾ ಮುಸ್ಲ್ಯಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೇರಳ ಹಜ್ ಸಮಿತಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಅನುಗ್ರಹ ಭಾಷಣ ಮಾಡಿದರು. ಕುಟ್ಯಾಡಿ ರಶೀದ್ ಬುಖಾರಿ ಮುಖ್ಯ ಭಾಷಣ ಮಾಡಿದರು. ಸೈಯದ್ ಅಶ್ರಫ್ ಅಸ್ಸಖಾಫ್ ಆದೂರ್, ಸೈಯದ್ ಹಸನುಲ್ ಅಹ್ದಲ್ ತಂಙಳ್, ಅಜ್ಮೀರ್ ಖಾಜಾತ್ ರವರ ಮೊಮ್ಮಗ ಸೈಯದ್ ಹಮ್ಮದ್ ಜಿಸ್ತಿ ಅಜ್ಮೀರ್ ಶರೀಫ್, ಡಾ. ಫಾಝಿಲ್ ರಝ್ ವಿ ಕಾವಳಕಟ್ಟೆ, ಸೈಯದ್ ಅಬ್ದುಲ್ ರಹ್ಮಾನ್ ಅಲ್ಬುಖಾರಿ ತಮಿಳುನಾಡು, , ಉಸ್ತಾದ್ ಸ್ವಾಲಿಹ್ ಸಅದಿ ತಳಿಪರಂಬ, ಉಸ್ತಾದ್ ಫಳ್ಳುರಹ್ಮಾನ್ ಅಹ್ಸನಿ, ಉಸ್ತಾದ್ ಅಬ್ದುಲ್ಲಾ, ಅಹ್ಸನಿ ಚೆಂಗಣಿ, ಸೈಯದ್ ಶಾಹೀರ್ ಅಲ್ಬುಖಾರಿ, ಸೈಯದ್ ಜಲಾಲುದ್ದೀನ್ ಸಅದಿ ಅಲ್ಬುಖಾರಿ ತಂಙಳ್, ಪಾತೂರು ಮೊಹಮ್ಮದ್ ಸಖಾಫಿ, ಸುಲೈಮಾನ್ ಕರಿವೆಳ್ಳೂರು, ಮೂಸಾ ಸಖಾಫಿ ಕಳತ್ತೂರು, ರಶೀದ್ ಸಅದಿ ಪೂಂಗೋಡ್, ಅಬ್ದುರ್ ರಝಾಕ್ ಸಖಾಫಿ ಕೊಟ್ಟಕುಂಞ, ಮೂಸಾ ಸಖಾಫಿ ಪೈವಳಿಕೆ, ಶೆಫೀಕ್ ಸಖಾಫಿ ಸೋಂಕಾಲ್ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಮಖ್ದುಮಿಯ್ಯ ದಶಮಾನೋತ್ಸವ ಸಮ್ಮೇಳನ ಮುಕ್ತಾಯ
0
ಫೆಬ್ರವರಿ 19, 2023
Tags