ಶಬರಿಮಲೆ: ಶಬರಿಮಲೆ ದೇಗುಲದಲ್ಲಿ ಸ್ಟ್ರಾಂಗ್ ರೂಂ ತೆರೆದು ಚಿನ್ನದ ತೂಕವನ್ನು ಪರಿಶೀಲಿಸಲು ದೇವಸ್ವಂ ಮಂಡಳಿ ನಿರ್ಧರಿಸಿದೆ.
ಶಬರಿಮಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳನ್ನು ಇರಿಸಲಾಗಿರುವ ಅರನ್ಮುಲಾದಲ್ಲಿನ ಸ್ಟ್ರಾಂಗ್ ರೂಮ್ ಅನ್ನು ಪರಿಶೀಲಿಸಲಾಗುವುದು. ಈ ಬಾರಿಯ ಉತ್ಸವದ ವೇಳೆ ಬಂದ ಚಿನ್ನ, ಬೆಳ್ಳಿಯನ್ನು ಸಂಪೂರ್ಣವಾಗಿ ಅರನ್ಮುಳದ ಸ್ಟ್ರಾಂಗ್ ರೂಂನಲ್ಲಿ ಇಟ್ಟಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ದೇವಸ್ವಂ ಅಧ್ಯಕ್ಷ ಕೆ. ಅನಂತ ಗೋಪನ್ ಅವರು ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಪ್ರತಿ ವರ್ಷ ದೇವಸ್ಥಾನಕ್ಕೆ ಭಕ್ತರು ಅರ್ಪಿಸುವ ಚಿನ್ನ ಮತ್ತು ಬೆಳ್ಳಿಯನ್ನು ಸನ್ನಿಧಿಯಲ್ಲಿ ವಿಜಿಲೆನ್ಸ್ ಸಮ್ಮುಖದಲ್ಲಿ ಸಿಬ್ಬಂದಿ ಸಿದ್ಧಪಡಿಸಿ ಪೆÇಲೀಸ್ ಭದ್ರತೆಯಲ್ಲಿ ಆರನ್ಮುಳದ ಸ್ಟ್ರಾಂಗ್ ರೂಂಗೆ ತರಲಾಗುತ್ತದೆ. ಈ ಬಾರಿ ಚಿನ್ನ, ಬೆಳ್ಳಿ ಸಂಪೂರ್ಣವಾಗಿ ಸ್ಟ್ರಾಂಗ್ ರೂಂಗೆ ತಲುಪಿಲ್ಲ ಅಂತ ಮಹಸರ್ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಬಾರಿ ಕೇವಲ 3300 ಗ್ರಾಂ ಚಿನ್ನ ಸಿಕ್ಕಿದೆ ಎಂದು ವರದಿಯಾಗಿದೆ. ಈ ಬಗ್ಗೆಯೂ ವಿಜಿಲೆನ್ಸ್ ಪರಿಶೀಲನೆ ನಡೆಸಿ ದೃಢಪಡಿಸಿದ್ದಾರೆ ಎನ್ನಲಾಗಿದೆ. ಬಹುತೇಕ ಎಲ್ಲ ಕಡೆ ಸಿಸಿಟಿವಿ ಅಳವಡಿಸಿರುವುದರಿಂದ ಅನಾಹುತಗಳಾಗುವ ಸಂಭವ ಕಡಿಮೆ, ಭಕ್ತರಲ್ಲಿ ತಪ್ಪು ತಿಳುವಳಿಕೆ ಮೂಡಿಸಲು ಕೆಲವರು ಆರೋಪ ಮಾಡುತ್ತಿದ್ದಾರೆ ಎನ್ನುತ್ತಾರೆ ಅನಂತ ಗೋಪನ್.
ಶಬರಿಮಲೆಯ ಚಿನ್ನದ ಪ್ರಮಾಣದಲ್ಲಿ ಕಡಿಮೆ ಇದೆ ಎಂಬ ಆರೋಪ: ಅರನ್ಮುಳಾದಲ್ಲಿ ಸ್ಟ್ರಾಂಗ್ ರೂಂ ತೆರೆದು ಪರಿಶೀಲನೆಗೆ ಚಿಂತನೆ
0
ಫೆಬ್ರವರಿ 27, 2023