ಕಾಸರಗೋಡು: ಮಗು ಪರಿಪಕ್ವವಾಗಿ ಬೆಳೆಯಲು ಪೌಷ್ಟಿಕವಾದ ಹಾಲು ಹೇಗೆ ಮುಖ್ಯವೋ ಅದೇ ರೀತಿ ಸಮಾಜದ ಪ್ರತಿಯೊಬ್ಬ ಮನುಷ್ಯನು ಉತ್ತಮವಾಗಿ ಸುಸಂಸ್ಕøತ ಮನುಷ್ಯನಾಗಬೇಕದಾದರೆ ಭಗವದ್ಗೀತೆಯ ಸಾರವನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯ ಎಂದು ಉಡುಪಿಯ ಪುತ್ತಿಗೆ ಮಠದ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥಸ್ವಾಮೀಜಿಯವರು ಹೇಳಿದರು
ಅವರು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮದ ಪ್ರಯುಕ್ತ ಭಾಗವಹಿಸಿ ಸುಮಾರು 400 ಭಗವದ್ಗೀತೆ ಪುಸ್ತಕವನ್ನು ವಿತರಿಸಿ ಮಾತನಾಡಿದರು.
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಬೋಧಿಸಿದ ಅಂಶಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ ಅವರಿಗೂ ಅದರಲ್ಲಿರುವ ಸತ್ವಯುತವಾದ ಗುಣಗಳನ್ನು ತಿಳಿಯುವಂತೆ ಮಾಡಬೇಕು ಎಂದರು. ಗೀತೆಯನ್ನು ಓದುವುದರಿಂದ ನಮ್ಮ ಮನಸ್ಸಿಗೆ ಶಾಂತಿ, ಸಮಧಾನ, ಏಕಾಗ್ರತೆ ಲಭಿಸುತ್ತದೆ ಮತ್ತು ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರ ಮಾಡುತ್ತದೆ ಎಂದರು.
ಕೋಟಿ ಗೀತಾ ಲೇಖನ ಯಜ್ಞ ಕಾರ್ಯಕ್ರಮದ ಸಂಚಾಲಕ ರಮಣ ಆಚಾರ್, ಇವರು ಭಗವದ್ಗೀತೆಯ ಮಹತ್ವದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನಾಡಿದರು.
ಪ್ರಶಾಂತಿ ಸೇವಾ ಟ್ರಸ್ಟಿನ ಉಪಧ್ಯಾಕ್ಷರಾದ ಪೆಲತಡ್ಕ ರಾಮಕೃಷ್ಣ ಭಟ್, ಆಡಳಿತ ಸಮಿತಿ ಸದಸ್ಯರು,ಪ್ರಶಾಂತಿ ವಿದ್ಯಾಕೇಂದ್ರದ ಪ್ರಾಂಶುಪಾಲರು, ಶಿಕ್ಷಕ ವೃಂದದವರು, ಶಾಲಾ ಸಿಬ್ಬಂದಿ, ಊರಿನ ಗಣ್ಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಶಾಂತಿ ಸೇವಾ ಟ್ರಸ್ಟಿನ ಸಂಚಾಲಕ ಹಿರಣ್ಯ ಮಹಾಲಿಂಗ ಭಟ್ ಸ್ವಾಗತಿಸಿದರು. ಟ್ರಸ್ಟಿನ ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್ ವಂದಿಸಿದರು.
ಭಗವದ್ಗೀತೆ ಪರಿಶುದ್ಧವಾದ ಹಾಲಿಗೆ ಸಮಾನ- ಶ್ರೀ ಸುಗುಣೇಂದ್ರ ತೀರ್ಥಸ್ವಾಮೀಜಿ
0
ಫೆಬ್ರವರಿ 20, 2023
Tags