ಕಾಸರಗೋಡು: ಜಿಲ್ಲೆ ಸೇರಿದಂತೆ ಕೇರಳಾದ್ಯಂತ ಸೂರ್ಯತಾಪ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಪತ್ತು ನಿವಾರಣಾ ತಂಡ ಸಾರ್ವಜನಿಕರಿಗಾಗಿ ಕೆಲವೊಂದು ನಿರ್ದೇಶ ಜಾರಿಗೊಳಿಸಿದೆ. ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಸೂರ್ಯರಶ್ಮಿ ನಿರಂತರವಾಗಿ ಮೈಮೇಲೆ ಬೀಳದಿರುವಂತೆ ನೋಡಿಕೊಳ್ಳಬೇಕು, ಶರೀರದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಪ್ರಯಾಣದ ಮಧ್ಯೆ ಸಣ್ಣ ಬಾಟಲಿಯಲ್ಲಿ ನೀರು ಜತೆಗೊಯ್ಯಬೇಕು, ಶುದ್ಧೀಕರಿಸಿದ ನೀರನ್ನು ಕುಡಿಯಬೇಕು ಹಾಗೂ ಬಾಯಾರಿಕೆಯಿಲ್ಲದಿದ್ದರೂ, ನೀರು ಸೇವನೆ ರೂಢಿಸಿಕೊಳ್ಳಬೇಕು, ನಿರ್ಜಲೀಕರಣಕ್ಕೆ ಕಾರಣವಾಗುವ ಕಾಫಿ, ಚಹಾ, ಮದ್ಯ, ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಹಗಲುಹೊತ್ತಲ್ಲಿ ಸೇವಿಸುವುದನ್ನು ಹೊರತುಪಡಿಸಬೇಕು, ಬಿಸಿಲಿಗೆ ತೆರಳುವ ಸಂದರ್ಭ ಹತ್ತಿಬಟ್ಟೆ ಧರಿಸುವುದು, ಶಿಕ್ಷಣ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು ಖಚಿತಪಡಿಸಬೇಕು.
ಪರೀಕ್ಷ ವೇಳೆಯಲ್ಲಿ ಪರೀಕ್ಷಾ ಕೊಠಡಿಗಳಿಗೆ ಶುದ್ಧ ನೀರು ಪೂರೈಸಬೇಕು, ವಿದ್ಯಾರ್ಥಿಗಳ ವಿಷಯದಲ್ಲಿ ಶಾಲಾ ಅಧಿಕಾರಿಗಳು, ಹೆತ್ತವರು ಪ್ರತ್ಯೇಕ ನಿಗಾವಹಿಸಬೇಕು, ವೃದ್ಧರು, ಗರ್ಭಿಣಿಯರು, ಅಸೌಖ್ಯಪೀಡಿತರು, ವಿಕಲಚೇತನರು ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಬಿಸಿಲಿಗೆ ಮೈಯೊಡ್ಡಿ ಸಂಚರಿಸದಿರುವಂತೆಯೂ ಸೂಚಿಸಲಾಗಿದೆ. ಬಿಸಿಲಿಗೆ ಮೈಯೊಡ್ಡಿ ಕೆಲಸ ನಡೆಸುವ ಕಾರ್ಮಿಕರು ತಮ್ಮ ಕೆಲಸದ ವೇಳೆಯಲ್ಲಿ ಬದಲಾವಣೆ ತಂದುಕೊಳ್ಳಬೇಕು, ಪತ್ರಕರ್ತರು, ಪೊಲೀಸರು ಬೆಳಗ್ಗೆ 11ರಿಂದ ಮಧ್ಯಾಹ್ನ 3ರ ವರೆಗೆ ಬಿಸಿಲು ನೇರ ಮೈಗೆ ಬೀಳದಂತೆ ಎಚ್ಚರವಸಹಿಸಬೇಕು, ಹಸಿರು ಸೊಪ್ಪು ಒಳಗೊಂಡ ತರಕಾರಿ, ಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು, ಮಕ್ಕಳನ್ನು, ವೃದ್ಧರನ್ನು ಪಾರ್ಕ್ ಮಾಡಿದ ವಾಹನದೊಳಗೆ ಕುಳ್ಳಿರಿಸಿ ತೆರಳದಿರುವಂತೆಯೂ ಸೂಚಿಸಲಾಗಿದೆ.
ಸೂರ್ಯತಾಪ: ವಿಪತ್ತು ನಿವಾರಣಾ ತಮಡದಿಂದ ಸೂಚನೆ
0
ಫೆಬ್ರವರಿ 24, 2023
Tags