ಕ್ಯಾನ್ಸರ್ ಹೆಸರು ಕೇಳಿದ್ರೆ ಜನ ಬೆಚ್ಚಿ ಬೀಳ್ತಾರೆ. ವೈದ್ಯಕೀಯ ಲೋಕದಲ್ಲಿ ಆದ ಮಹಾ ಬದಲಾವಣೆಗಳಿಂದ ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಅಲ್ಲದಿದ್ದರೂ ಕೂಡ ಒಂದು ಬಾರಿ ಈ ಕಾಯಿಲೆ ವಕ್ಕರಿಸಿಕೊಂಡ್ರೆ ಮನುಷ್ಯ ಯಮ ಯಾತನೆ ಪಡಬೇಕಾಗುತ್ತದೆ.
ಪ್ರತಿನಿತ್ಯ ವೈದ್ಯಕೀಯ ಲೋಕದಲ್ಲಿ ಒಂದಲ್ಲ ಒಂದು ಬದಲಾವಣೆಗಳು ಆಗುತ್ತಲಿರುತ್ತದೆ. ಆಶ್ಚರ್ಯಕರವೆಂಬಂತೆ ಈ ಬಾರಿ ಇರುವೆಗಳಲ್ಲೂ ಕ್ಯಾನ್ಸರ್ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಪತ್ತೆ ಹಚ್ಚಲಾಗಿದೆ.
ಇರುವೆಯಿಂದ ಕ್ಯಾನ್ಸರ್ ಪತ್ತೆ ಹಚ್ಚೋದಕ್ಕೆ ಸಾಧ್ಯನಾ?
ಇತ್ತೀಚಿಗಿನ ಒಂದು ಅಧ್ಯಯನದ ಪ್ರಕಾರ ಮೂತ್ರದ ಮೂಲಕ ಇರುವೆಗೆ ಕ್ಯಾನ್ಸರ್ ಪತ್ತೆ ಹಚ್ಚುವಂತೆ ವಿಶೇಷ ತರಬೇತಿ ನೀಡಲಾಗಿದ್ಯಂತೆ. ಆಚ್ಚರಿಯಾದ್ರು ಇದು ನಿಜ. ಹಾಗಾದ್ರೆ ಇರುವೆಯು ಯೂರಿನ್ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚೋದು ಹೇಗೆ ಅನ್ನೋದನ್ನ ತಿಳಿಸಿಕೊಡ್ತೀವಿ.
ಹೌದು, ಅಧ್ಯಯನಗಳ ಪ್ರಕಾರ ಇರುವೆಗಳು ಯೂರಿನ್‌ನಿಂದ ಬರುವ ವಾಸನೆಯ ಸಹಾಯದಿಂದ ಕ್ಯಾನ್ಸರ್ ಪತ್ತೆ ಹಚ್ಚುವ ಶಕ್ತಿಯನ್ನು ಹೊಂದಿದ್ಯಂತೆ. ನಿಮಗೆಲ್ಲಾ ಗೊತ್ತಿರುವ ಹಾಗೆ ಪ್ರಾಣಿಗಳು ತಮ್ಮ ಇಂದ್ರಿಯಗಳಲ್ಲಿ ಅಭೂತಪೂರ್ವ ಶಕ್ತಿಯನ್ನು ಹೊಂದಿರುತ್ತದೆ. ಇವುಗಳು ಕೇವಲ ವಾಸನೆಯ ಮೂಲಕ ಎಲ್ಲವನ್ನೂ ತಿಳಿದುಕೊಳ್ಳುವ ಶಕ್ತಿಯನ್ನು ಹೊಂದಿದೆ. ಉದಾಹರಣೆಗೆ ಆಹಾರವನ್ನು ಹುಡುಕುವುದು, ಪರಭಕ್ಷಕಗಳನ್ನು ಮತ್ತು ಸಂಗಾತಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ.
ಇರುವೆಗಳು ಕ್ಯಾನ್ಸರ್ ಕೋಶವನ್ನು ಗುರುತಿಸುತ್ತದೆ
ಕ್ಯಾನ್ಸರ್ ಕೋಶಗಳಲ್ಲಿ ಬಾಷ್ಪಶೀಲ ಸಾವಯವ ಸಂಯುಕ್ತಗಳು (volatile organic compounds) ಇದ್ದು, ಇರುವೆಗಳಿಗೆ ವಾಸನೆಯ ಮೂಲಕ ಇದನ್ನು ಪತ್ತೆಹಚ್ಚುವಂತೆ ತರಬೇತಿ ನೀಡಲಾಗಿದೆ.
ಇರುವೆಗಳ ಆಂಟೆನಾಗಳಲ್ಲಿ ಅಸಾಧಾರಣ ಸಂಖ್ಯೆಯ ವಾಸನೆ ಗ್ರಾಹಕಗಳನ್ನು ಒಳಗೊಂಡಿದ್ದು, ಇವುಗಳು ಸಸ್ತನಿಗಳಂತೆಯೇ ವಾಸನೆಯ ಪ್ರಜ್ಞೆಯನ್ನು ಹೊಂದಿಲ್ಲ. ಆದರೆ ವಿಭಿನ್ನ ರೀತಿಯ ವಾಸನೆಯನ್ನು ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ.
ಒಂದು ಅಂಶದಲ್ಲಿರುವ ಬೇರೆ ಬೇರೆ ವಿಧದ ವಾಸನೆಯನ್ನು ಪತ್ತೆ ಹಚ್ಚುವ ಗುಣವನ್ನು ಇರುವೆಗಳು ಹೊಂದಿದೆ.
ಇರುವೆಗಳ ನೆನಪಿನ ಶಕ್ತಿ ಚೆನ್ನಾಗಿದೆ
ಇರುವೆಗಳ ನೆನೆಪಿನ ಶಕ್ತಿ ಚೆನ್ನಾಗಿದೆ ಎಂದು ಅಧ್ಯಯಯನಗಳೇ ಸಾಭೀತು ಪಡಿಸಿದೆ. ಕೇವಲ ಒಂದು ತರಬೇತಿ ಅವಧಿಯ ನಂತರ ಇರುವೆಗಳು ದೀರ್ಘಕಾಲೀನ ನೆನಪುಗಳನ್ನು ಉಳಿಸಿಕೊಳ್ಳುತ್ತಂತೆ. ಅಷ್ಟೇ ಅಲ್ಲ, ಬರೋಬ್ಬರಿ 9 ಪರೀಕ್ಷೆಗಳ ನಂತರವೂ ಸರಿಯಾಗಿ ಪ್ರತಿಕ್ರಿಯೆ ನೀಡಿದ್ಯಂತೆ.
ನಿಮಗೊತ್ತಾ ಕೇವಲ ಮೂರು ಬಾರಿ ತರಬೇತಿ ನೀಡಿದ ನಂತರ ಕ್ಯಾನ್ಸರ್ ಕೋಶಗಳಲ್ಲಿ ಇರುವ ಬಾಷ್ಪಶೀಲ ಸಾವಯವ ಸಂಯುಕ್ತಗಳನ್ನು ಇರುವೆಗಳು ಪತ್ತೆ ಹಚ್ಚಿದ್ಯಂತೆ. ಹೀಗಾಗಿ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಇರುವ ಅಗ್ಗವಾದ ಹಾಗೂ ಉಪಯುಕ್ತವಾದ ಸಾಧನವಾಗಿದೆ.
ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಭರವಸೆ ಆಗಬಹುದೇ?
ಸಂಶೋಧಕರ ಪ್ರಕಾರ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಸಾಧನವಾಗಬಹುದು. ಯಾಕೆಂದರೆ ಇರುವೆಗಳ ನೆನಪಿನ ಶಕ್ತಿ ಚೆನ್ನಾಗಿದೆ, ವೇಗವಾಗಿ ಕಲಿತುಕೊಳ್ಳುತ್ತದೆ, ಅತ್ಯಂತ ವೇಗವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಅಗ್ಗವಾದ ಸಾಧನವಾಗಿದೆ.
ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಭರವಸೆ ಆಗಬಹುದೇ?
ಸಂಶೋಧಕರ ಪ್ರಕಾರ ಇರುವೆಗಳು ಕ್ಯಾನ್ಸರ್ ಪತ್ತೆ ಹಚ್ಚಲು ಭವಿಷ್ಯದ ಸಾಧನವಾಗಬಹುದು. ಯಾಕೆಂದರೆ ಇರುವೆಗಳ ನೆನಪಿನ ಶಕ್ತಿ ಚೆನ್ನಾಗಿದೆ, ವೇಗವಾಗಿ ಕಲಿತುಕೊಳ್ಳುತ್ತದೆ, ಅತ್ಯಂತ ವೇಗವಾಗಿ ಪ್ರತಿಕ್ರಿಯಿಸುತ್ತದೆ ಮತ್ತು ಅಗ್ಗವಾದ ಸಾಧನವಾಗಿದೆ.