ಕಾಸರಗೋಡು: ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನಡಾವಳಿ ಮಹೋತ್ಸವ ಮಾ. 3ರಿಂದ 11ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. 3ರಂದು ಪ್ರತಿಷ್ಠಾ ಮಹೋತ್ಸವ, 8ರಿಂದ 11ರ ವರೆಗೆ ನಡಾವಳಿ ಉತ್ಸವ ನಡೆಯುವುದು. ಬ್ರಹ್ಮಶ್ರೀ ತಂತ್ರಿವರ್ಯ ಕಾವುಮಠ ಶ್ರೀ ವಿಷ್ಣುಪ್ರಕಾಶ್ ಕಾವುಮಠ ನೇತೃತ್ವ ವಹಿಸುವರು ಎಂದು ಉತ್ಸವ ಸಮಿತಿ ಅಧ್ಯಕ್ಷ ವಕೀಲ ಕೆ. ನಾರಾಯಣ ವಡಕ್ಕೇವೀಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
3ರಂದು ಬೆಳಗ್ಗೆ 11ಕ್ಕೆ ಮಹಾಪೂಜೆ, 11.30ಕ್ಕೆ ಶ್ರೀ ದೇವರ ನೃತ್ಯ ಬಲಿ ಉತ್ಸವ ನಡೆಯುವುದ. 4ರಂದು ಬೆಳಗ್ಗೆ 8.20ರಿಂದ 9ಗಂಟೆ ನಡಾವಳಿ ಉತ್ಸವಕ್ಕೆ ಗೊನೆಕಡಿಯುವ ಮುಹೂರ್ತ ನಡೆಯುವುದು. 5ರಂದು ಬೆಳಗ್ಗೆ 9.30ಕ್ಕೆ ನಾಗತಂಬಿಲ, ರಾತ್ರಿ 10ರಿಂದ ಬ್ರಹ್ಮರಾಕ್ಷಸನಿಗೆ ವಿಶೇಷ ಪೂಜೆ ನಡೆಯುವುದು. 8ರಂದು ಬೆಳಗ್ಗೆ 10ಕ್ಕೆ ಕಾಸರಗೋಡು ಕೊರಕ್ಕೋಡು ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದಏವಸ್ಥಾನ ವಠಾರದಿಂದ ತೆರುವತ್ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆ, ನಂತರ ಉಗ್ರಾಣ ಮುಹೂರ್ತ ನಡೆಯುವುದು.
9ರಂದು ಬೆಳಗ್ಗೆ 8.30ಕ್ಕೆ ಚಂಡಿಕಾ ಹೋಮ ನಡೆಯುವುದು. ಮಧ್ಯಾಹ್ನ 12.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಆಚಾರ್ಯ ವಿನೋದ್‍ಜೀ ಮುಖ್ಯ ಭಾಷಣ ಮಾಡುವರು. ವಕೀಲ ನಾರಾಯಣ ಕೆ. ವಡಕ್ಕೇವೀಡ್ ಅಧ್ಯಕ್ಷತೆ ವಹಿಸುವರು. 10ರಂದು ಸಂಜೆ 6ಕ್ಕೆ ಶ್ರೀ ಲಲಿತಾಸಹಸ್ರನಾಮಾವಳಿ, ರಾತ್ರಿ 8.30ಕ್ಕೆ ಭಂಡಾರ ಮನೆಯಿಂದ ಭಂಡಾರ ಆಗಮನ, 9.30ಕ್ಕೆ ಶ್ರೀದೇವರ ನೃತ್ಯಬಲಿ ಉತ್ಸವ, 11ರಂದು ಬೆಳಗ್ಗೆ 4.30ಕ್ಕೆ ಶ್ರೀದೇವರ ಬಲಿ ಉತ್ಸವ, ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, 7ಕ್ಕೆ ಚಪ್ಪರ ಮದುವೆ, 8.30ಕ್ಕೆ ಪಿಲಿಚಾಮುಂಡಿ ದೈವದ ಕೋಲ, 10ಕ್ಕೆ ಬಬ್ಬರಿಯ ದೈವದ ಕೋಲ, 11ಕ್ಕೆ ಶ್ರೀ ದೇವರ ನೃತ್ಯ ಬಲಿ ಉತ್ಸವ, 12ಕ್ಕೆ ವಿಷ್ಣುಮೂರ್ತೀ ದೈವದ ಕೋಲ, ಸಂಜೆ 6ಕ್ಕೆ ಗುಳಿಗ ಕೋಲದ ನಂತರ ಕ್ಷೇತ್ರದಿಂದ ಭಂಡಾರ ಹಿಂತಿರುಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇತ್ರ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಕೋಟೆಕಣಿ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಎನ್ ಕಮಲಾಕ್ಷನ್, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಆರ್ ಬ್ರಿಜೇಶ್, ಕೋಶಾಧಿಕಾರಿ ಭರತನ್ ಪಿ.ಕೆ, ಕ್ಷೇತ್ರ ಸಮಿತಿ ಸದಸ್ಯ ವೇಣುಗೋಪಾಲ ಭಾಮ ಉಪಸ್ಥಿತರಿದ್ದರು.
ಕಾಸರಗೋಡು ತೆರುವತ್ ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಪ್ರತಿಷ್ಠಾ ವಾರ್ಷಿಕೋತ್ಸವ, ನಡಾವಳಿ ಮಹೋತ್ಸವ
0
ಫೆಬ್ರವರಿ 28, 2023