HEALTH TIPS

ಗ್ರಾಮಗಳಿಗೆ ಮಾಧ್ಯಮ ಸಾಕ್ಷರತೆ ನೀಡಬೇಕು: ಪತ್ರಕರ್ತ ಎಂದಿಗೂ ಕಾರ್ಯಕರ್ತನಲ್ಲ: ಡಾ. ಕೆ ಜಿ ಸುರೇಶ್


             ಕನ್ಯಾಕುಮಾರಿ: ಭಾರತೀಯ ಸಮೂಹ ಸಂವಹನ ಸಂಸ್ಥೆ ಸಹಯೋಗದಲ್ಲಿ ವಿಶ್ವಸಂವಾದ ಕೇಂದ್ರ ಆಯೋಜಿಸಿರುವ ಪತ್ರಿಕೋದ್ಯಮ ಕಾರ್ಯಾಗಾರ ಆರಂಭವಾಗಿದೆ.
            ಭೋಪಾಲ್ ಮಖನ್‍ಲಾಲ್ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಜಿ.ಸುರೇಶ್ ಉದ್ಘಾಟಿಸಿ ಪತ್ರಕರ್ತ ಜನರಿಗೆ ವರದಿ ಮಾಡಬೇಕೇ ಹೊರತು ಕ್ರಿಯಾಶೀಲತೆಯಲ್ಲ ಎಂದು ಹೇಳಿದರು. ಕನ್ಯಾಕುಮಾರಿ ವಿವೇಕಾನಂದ ಕೇಂದ್ರ ಆವರಣದ ಏಕನಾಥ ಸಭಾಂಗಣದಲ್ಲಿ ಆಯೋಜಿಸಿದ್ದ ‘ಯುವ ಪತ್ರಿಕೋದ್ಯಮ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
           ಪತ್ರಕರ್ತನ ಕೆಲಸವೆಂದರೆ ಜನರಿಗೆ ಪ್ರತಿಯೊಂದು ಸುದ್ದಿಯನ್ನು ಹೇಳುವುದು. ಇದು ಬೀದಿನಾಯಿಯ ರಕ್ಷಣೆ ಮಾತ್ರವಲ್ಲದೆ ಅದರಿಂದ ಕಚ್ಚಿದ ಮಾನವನ ರಕ್ಷಣೆಯನ್ನೂ ಒಳಗೊಂಡಿದೆ. ಒಬ್ಬ ಕಾರ್ಯಕರ್ತ ಒಂದು ಕಡೆ ಮಾತ್ರ ಮಾತನಾಡಬಹುದು. ಮಾಧ್ಯಮ ವಿದ್ಯಾರ್ಥಿಗಳು ಹಳ್ಳಿಗಳಿಗೆ ಮಾಧ್ಯಮ ಸಾಕ್ಷರತೆ ನೀಡಲು ಸಿದ್ಧರಾಗಬೇಕು. ಸುಳ್ಳು ಮಾಹಿತಿ ಹರಡುವ ಈ ಕಾಲಘಟ್ಟದಲ್ಲಿ ಮಾಧ್ಯಮ ವಿದ್ಯಾರ್ಥಿಗಳೂ ಹಳ್ಳಿಗಳಿಗೆ ಶಿಕ್ಷಣ ನೀಡುವ ಕೆಲಸಕ್ಕೆ ಮುಂದಾಗಬೇಕು.' ಎಂದು ಡಾ. ಸುರೇಶ್ ಸ್ಪಷ್ಟಪಡಿಸಿದ್ದಾರೆ.
       ಎ.ಡಿ. ಮತ್ತು ಬಿ.ಸಿ. ಯಂತೆಯೇ ಬಿಫೆÇೀರ್ ಗೂಗಲ್ (ಬಿಜಿ) ಮತ್ತು ಆಫ್ಟರ್ ಗೂಗಲ್ (ಎಜಿ) ಎಂದು ಎರಡು ಭಾಗಗಳಲ್ಲಿ ಮಾಧ್ಯಮ ಕಾರ್ಯನಿರ್ವಹಿಸುವುದನ್ನು ನೋಡುವ ಸಮಯ ಇದು. ಕಣ್ಣು-ಕಿವಿ ತೆರೆದು ಸುದ್ದಿಗಾಗಿ ಕಾಯುವುದರ ಜೊತೆಗೆ ಮುಕ್ತ ಮನಸ್ಸಿನಿಂದ ಕೂಡಿರಬೇಕು ಎಂದು ತಿಳಿಸಿದರು.
            ವಿಶ್ವ ಸಂವಾದ ಕೇಂದ್ರದ ಅಧ್ಯಕ್ಷ ಎಂ.ರಾಜಶೇಖರಪಾಣಿಕರ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಕೇಂದ್ರ ಪ್ರಾಂತ ಸಂಘಟಕ ವಿಶ್ವಾಸ ಲಾಪಾಲಕರ್, ಐಐಎಂಸಿ ಪ್ರಾದೇಶಿಕ ನಿರ್ದೇಶಕ ಡಾ. ಅನಿಲಕುಮಾರ ವಡವತ್ತೂರು, ಮ್ಯಾಗ್ ಕಾಮ್ ನಿರ್ದೇಶಕ ಡಾ.ಎ.ಕೆ. ಅನುರಾಜ್, ವಿಶ್ವಸಂವಾದಕೇಂದ್ರಂ ಕಾರ್ಯಕಾರಿ ಸದಸ್ಯ ಎಂ. ಬಾಲಕೃಷ್ಣನ್ ಮಾತನಾಡಿದರು. ಪಿಐಬಿ ಹೆಚ್ಚುವರಿ ಮಹಾನಿರ್ದೇಶಕ ವಿ. ಪಳನಿಸ್ವಾಮಿ ಕಾರ್ಯಾಗಾರದಲ್ಲಿ ತರಗತಿ ನಡೆಸಿದರು. ಪ್ರಜ್ಞಾ ಸ್ಟ್ರೀಮ್ ನ ರಾಷ್ಟ್ರೀಯ ಸಂಯೋಜಕ ಜೆ.ನಂದಕುಮಾರ್, ಪೆÇ್ರ.ಪಿ.ಜಿ. ಹರಿದಾಸ್, ಎಂ.ರಾಜಶೇಖರಪಣಿಕರ್ ಮತ್ತು ಜಿ.ಕೆ.ಸುರೇಶ್ ಬಾಬು ಅವರು ವಿವಿಧ ವಿಷಯಗಳ ಕುರಿತು ಇಂದು ಕಾರ್ಯಾಗಾರದಲ್ಲಿ ತರಗತಿಗಳನ್ನು ತೆಗೆದುಕೊಂಡರು.  ಕಾರ್ಯಾಗಾರ ಇಂದು ತಡ ಸಂಜೆ ಮುಕ್ತಾಯಗೊಳ್ಳಲಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries