ನವದೆಹಲಿ: ಪುರುಷ ಹಾಗೂ ಮಹಿಳೆಯರ ಮದುವೆಯ ಕನಿಷ್ಠ ವಯಸ್ಸು ಒಂದೇ ಇರಬೇಕು ಎಂದು ಕೋರಿ ವಕೀಲೆ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಳ್ಳಿಹಾಕಿದೆ. 'ನ್ಯಾಯಾಲಯವು ಕಾನೂನು ರೂಪಿಸಲು ಸಾಧ್ಯವಿಲ್ಲ.
ಈ ಕೆಲಸವನ್ನು ಸಂಸತ್ತು ಮಾಡಬೇಕು' ಎಂದು ಅಭಿಪ್ರಾಯಪಟ್ಟಿದೆ.
'ಕಾನೂನು ರೂಪಿಸುವಂತೆ ಸಂಸತ್ತಿಗೆ ನ್ಯಾಯಾಲಯವು ಆದೇಶ ನೀಡಲು ಸಾಧ್ಯವಿಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಜೆ.ಬಿ. ಪಾರ್ದೀವಾಲ ಅವರಿದ್ದ ಪೀಠವು ಹೇಳಿತು.
'ಈ ಕೆಲಸವನ್ನು ನಾವು ಸಂಸತ್ತಿಗೆ ಬಿಟ್ಟುಕೊಡಬೇಕು. ನಾವು ಕಾನೂನು ರೂಪಿಸುವಂತಿಲ್ಲ. ಸಂಸತ್ತಿಗೂ ನಮಗೂ ವ್ಯತ್ಯಾಸ ಇದೆ. ಸಂವಿಧಾನದ ಸಂರಕ್ಷಣೆಯ ಹೊಣೆ ನಮ್ಮದು ಮಾತ್ರ ಎಂಬ ಭಾವನೆ ನಮ್ಮಲ್ಲಿ ಇರಬಾರದು. ಈ ಹೊಣೆಗಾರಿಕೆ ಸಂಸತ್ತಿಗೂ ಇದೆ' ಎಂದು ಹೇಳಿದೆ.