ಪೆರ್ಲ : ಶೇಣಿ ಮಣಿಯಂಪಾರೆಯ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ಮಾ.11 ರಂದು ಸಾಮೂಹಿಕ ಶನೈಶ್ಚರ ಪೂಜೆ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಂದಿರದ ಗುರುಸ್ವಾಮಿ ನಾರಾಯಣ ಮೂಲ್ಯ ಬಾರೆದಳ ಅವರ ವಿಶೇಷ ಪ್ರಾರ್ಥನೆಯ ಬಳಿಕ ಮಂದಿರದ ಅಧ್ಯಕ್ಷ ರವೀಂದ್ರನಾಥ ನಾಯಕ್ ತೋಟದಮನೆ ಬಿಡುಗಡೆಗೊಳಿಸಿದರು.
ಮಂದಿರದ ಪದಾಧಿಕಾರಿಗಳಾದ ಸದಾಶಿವ ಆಚಾರ್ಯ ಶೇಣಿ, ರಾಮಕೃಷ್ಣ ಮಣಿಯಂಪಾರೆ, ರಘರಾಮ ಬೋರ್ಕರ್ ಶೇಣಿ, ನಾರಾಯಣ ನಾಯ್ಕ ಬಾರೆದಳ, ಕಿರಣ್,ಪುನೀತ್ ಶೇಣಿ ಮೊದಲಾದವರು ಭಾಗವಹಿಸಿದ್ದರು.
ಶೇಣಿ ಮಣಿಯಂಪಾರೆ ಶ್ರೀಅಯ್ಯಪ್ಪ ಭಜನಾ ಮಂದಿರದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ಆಮಂತ್ರಣ ಪತ್ರಿಕೆ ಬಿಡುಗಡೆ
0
ಫೆಬ್ರವರಿ 20, 2023