ಕುಂಬಳೆ: ಕುಂಬಳೆಯ ರೈಲ್ವೆ ನಿಲ್ದಾಣ ಸನಿಹ ಅನೈತಿಕ ಚಟುವಟಿಕೆ ನಡೆಯುತ್ತಿತ್ತೆನ್ನಲಾದ ಕೇಂದ್ರವೊಂದಕ್ಕೆ ಡಿವೈಎಫ್‍ಐ ಕಾರ್ಯಕರ್ತರ ತಂಡವೊಂದು ದಾಳಿ ನಡೆಸಿದ್ದು, ಆಕ್ರೋಷಿತ ತಂಡ ಕೊಠಡಿಯೊಳಗಿನ ಪೀಠೋಪಕರಣಗಳನ್ನು ನಾಶಗೊಳಿಸಿದೆ. ಇಲ್ಲಿನ ಬಹು ಅಂತಸ್ತಿನ ಕಟ್ಟಡದ ಮೂರನೇ ಮಹಡಿಯ ಕೊಠಡಿಯೊಂದರಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆಸುತ್ತಿದ್ದಂತೆ ಅನೈತಿಕ ಚಟುವಟಿಕೆಯಲ್ಲಿ ನಿರತರಾಗಿದ್ದ ನಾಲ್ವರು ಯುವತಿಯರನ್ನು ಇಲ್ಲಿಂದ ಹೊರಗೆ ಓಡಿಸಿದ್ದಾರೆ. ಕಾಸರಗೋಡಿನ ಚಟ್ಟಂಚಾಲ್ ಎಂಬಲ್ಲೂ ಇದೇ ರೀತಿಯ ಅನೈತಿಕ ಕೇಂದ್ರವೊಂದು ಕಾರ್ಯಾಚರಿಸುತ್ತಿದ್ದು, ಅದೇ ಕೇಂದ್ರದವರು ಕುಂಬಳೆಯಲ್ಲೂ ಕೇಂದ್ರವನ್ನು ಮುನ್ನಡೆಸುತ್ತಿರುವ ಬಗ್ಗೆ ಮಾಹಿತಿಯಿದೆ. ಅನೈತಿಕ ಕೇಂದ್ರ ಎಗ್ಗಿಲ್ಲದೆ ಕಾರ್ಯಾಚರಿಸುತ್ತಿರುವುದು ಪೊಲೀಸರ ನಿರ್ಲಕ್ಷ್ಯ ಧೋರಣೆಗೆ ಕಾರಣವಾಗಿದೆ. ಈ ಬಗ್ಗೆ ಉನ್ನತರ ಕೈವಾಡವಿಲ್ಲದೆ ಇಂತಹ ಕೇಂದ್ರಗಳು ಕಾರ್ಯಾಚರಿಸಲು ಸಾಧ್ಯವಿಲ್ಲ ಎಂಬುದಾಗಿ ಸ್ಥಳೀಯ ನಿವಾಸಿಗಳು ಅಭಿಪ್ರಯ ವ್ಯಕ್ತಪಡಿಸಿದ್ದಾರೆ.
ಕುಂಬಳೆಯಲ್ಲಿ ಅನೈತಿಕ ಕೇಂದ್ರಕ್ಕೆ ಡಿವೈಎಫ್‍ಐ ಕಾರ್ಯಕರ್ತರ ದಾಳಿ, ಹಾನಿ
0
ಫೆಬ್ರವರಿ 17, 2023