ಪೆರ್ಲ: ಎಣ್ಮಕಜೆ ಪಂಚಾಯಿತಿಯ ಸ್ವರ್ಗ ರಸ್ತೆಯ ಗಾಳಿಗೋಪುರದಿಂದ ಸಜಂಗದ್ದೆಗೆ ತೆರಳುವ ರಸ್ತೆ ಡಾಂಬರೀಕರಣ ನಡೆಸಿ ಅಳವಡಿಸಿರುವ ನಾಮಫಲಕದಲ್ಲಿ ವಿಕೃತಿಗೊಳಿಸಿ ಬರೆಯಲಾಗಿದ್ದ ಜಾಗದ ಹೆಸರನ್ನು ಸರಿಪಡಿಸಲಾಗಿದ್ದು, ಮತ್ತೆ ಹೊಸ ಬೋರ್ಡ್ ಅಳವಡಿಸಲಾಗಿದೆ.
ಇಲ್ಲಿ ಗಾಳಿಗೋಪುರದ ಗೋಳಿಕಟ್ಟೆಯನ್ನು 'ಗೋಳಿಕಟ್ಟ' ಮಾಡಿದ್ದರೆ, ಸಜಂಗದ್ದೆಯನ್ನು 'ಸಜಂಕಟ್ಟ'ಮಾಡಿ ವಿಕೃತಿಗೊಳಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ನಾಗರಿಕರು ತಮ್ಮ ಆಕ್ರೋಷ ವ್ಯಕ್ತಪಡಿಸಿದ್ದರು. ನಾಮಫಲಕದಲ್ಲಿ ಜಾಗದ ಹೆಸರು ವಿಕೃತಿಗೊಳಿಸಿರುವುದನ್ನು ಸ್ಥಳೀಯ ನಾಗರಿಕರು ಖಂಡಿಸಿದ್ದು, ಹೊಸ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯಿತಿಯ 2022-23ನೇ ಸಾಲಿನ ವಾರ್ಷಿಕ ಯೋಜನಾ ಮೊತ್ತಬಳಸಿ 55ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ನಡೆಸಲಾಗಿತ್ತು. ಈ ಬಗ್ಗೆ ಬ್ಲಾಕ್ ಪಂಚಾಯಿತಿ ಸದಸ್ಯ ಬಟ್ಟು ಶೆಟ್ಟಿ ಅವರು ಅಧಿಕಾರಿಗಳ ಗಮನಸೆಳೆದಿದ್ದರು.
ಜಾಗದ ಹೆಸರು ವಿಕೃತಿ-ತಪ್ಪು ಸರಿಪಡಿಸಿದ ಅಧಿಕಾರಿಗಳು
0
ಫೆಬ್ರವರಿ 14, 2023