ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಸರಗೋಡು ಜಿಲ್ಲಾ ಭೇಟಿ ಸಂದರ್ಭ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಜೆಟ್‍ನಲ್ಲಿ ಇಂಧನ ಸೆಸ್ ಏರಿಕೆ ನಂತರ ರಾಜ್ಯವ್ಯಾಪಕವಾಗಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ತಮ್ಮ ಪ್ರತಿಭಟನೆ ಬಿಗುಗೊಳಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭದ್ರತೆಯನ್ನೂ ಹೆಚ್ಚಿಸಲಾಗಿತ್ತು. ರಕ್ಷಣೆಗಾಗಿ 15ಮಂದಿ ಡಿವೈಎಸ್‍ಪಿಗಳು, 40ಮಂದಿ ಪೊಲೀಸ್ ಇನ್ಸ್‍ಪೆಕ್ಟರ್‍ಗಳು ಸೇರಿದಂತೆ 900ಮಂದಿ ಪೊಲೀಸರನ್ನು ಜಿಲ್ಲೆಯಲ್ಲಿ ಮುಖ್ಯಮಂತ್ರಿ ರಕ್ಷಣೆಗಾಗಿ ನಿಯೋಜಿಸಲಾಗಿತ್ತು.
ಇದರ ಹೊರತಾಗಿ ವಯನಾಡು, ಕಣ್ಣೂರು, ಕೋಯಿಕ್ಕೋಡ್ ಜಿಲ್ಲೆಗಳ 300ಮಂದಿ ಪೊಲೀಸರನ್ನು ವಿಶೇಷ ರಕ್ಷಣೆಗಾಗಿ ಕರೆಸಿಕೊಳ್ಳಲಾಗಿತ್ತು. ಕಣ್ಣೂರಿನಿಂದ ಜಿಲ್ಲೆ ಪ್ರವೇಶಿಸುವ ಹಾದಿಯುದ್ದಕ್ಕೂ ಪ್ರತಿ ಕಿ.ಮೀಗೆ ಒಬ್ಬರಂತೆ ಪೊಲೀಸ್ ಸ್ಪೆಶ್ಯಲ್ ಬ್ರಾಂಚ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಕೋಯಿಕ್ಕೋಡ್ ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರಿಂದ ಕರಿಪತಾಕೆ ಪ್ರದರ್ಶಿಸಿರುವುದು ಪ್ರತಿಭಟನೆಗೂ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಭದ್ರತೆ ಏರ್ಪಡಿಸಲಾಗಿತ್ತು. ವಿವಿಧೆಡೆ ಮುಂಜಾಗ್ರತಾ ಕ್ರಮವಾಗಿ ಹಲವರನ್ನು ಪೊಲೀಸರು ಬಂಧಿಸಿದ್ದರು.
ಪ್ರತಿಭಟನೆ ವ್ಯಾಪಕ: ಪೊಲೀಸ್ ಬಂದೋಬಸ್ತ್‍ನಲ್ಲಿ ಸಿಎಂ ಪರ್ಯಟನೆ
0
ಫೆಬ್ರವರಿ 20, 2023
Tags