ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಶಿವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಭಾನುವಾರ ಶ್ರೀ ಪಿಲಿಚಾಮುಂಡಿ ದೈವದ ಕೋಲ ಜರಗಿತು. ಶನಿವಾರ ಶ್ರೀ ಉದನೇಶ್ವರ ಭಜನಾ ಸಂಘ ಪೆರಡಾಲ ಇವರ ನೇತೃತ್ವದಲ್ಲಿ ವಿವಿಧ ಭಜನ ಸಂಘಗಳ ಸಹಯೋಗದೊಂದಿಗೆ ಏಕಾಹ ಭಜನೆ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಾರಂಗ ಸಂಗೀತ ಶಾಲೆ ಕುಮಾರಮಂಗಲ ಹಾಗೂ ಕು. ಶ್ರೀವರದಾ ಪಟ್ಟಾಜೆ ಮತ್ತು ಬಳಗದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರಗಿತು. ರಾತ್ರಿ ಶ್ರೀ ಉದನೇಶ್ವರ ಯಕ್ಷಗಾನ ಕಲಾಸಂಘ ಪೆರಡಾಲ ಮತ್ತು ಆಹ್ವಾನಿತ ಕಲಾವಿದರ ಕೂಡುವಿಕೆಯಿಂದ ತ್ರಿಜನ್ಮ ಮೋಕ್ಷ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಪೆರಡಾಲದಲ್ಲಿ ಪಿಲಿಚಾಮುಂಡಿ ದೈವದ ಕೋಲ
0
ಫೆಬ್ರವರಿ 21, 2023
Tags