ಉಪ್ಪಳ: ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದವರಿಂದ ಮಾರ್ಚ್ 4 ಹಾಗೂ 5 ರಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ‘ಕೃಷಿ ಬದುಕಿನ ಪಾಠ ಶಿಬಿರ’ ಎಂಬ ಎರಡು ದಿನಗಳ ಅಧ್ಯಯನ ಶಿಬಿರ ನಡೆಯಲಿದೆ.
ಹಳ್ಳಿಗಾಡಿನ ಆಧ್ಯಾತ್ಮಿಕ ಜಾಗದಲ್ಲಿ ಮೈ ಬೆವರಿಳಿಸಿ ದುಡಿಮೆ, ಹಚ್ಚ ಹಸಿರಿನ ಪ್ರಶಾಂತ ಭೂಮಿಯಲ್ಲಿ ಕೃಷಿ ಚಟುವಟಿಕೆ, ಕೈ ತೋಟ ಪ್ರಾತ್ಯಕ್ಷಿಕೆ, ಮನಸ್ಸಿಗೆ ಉಲ್ಲಾಸ ನೀಡುವ ಕಾರ್ಯಕ್ರಮ ಮೊದಲಾದ ಕಾರ್ಯಕ್ರಮಗಳು ಶಿಬಿರದ ಭಾಗವಾಗಿ ಆಯೋಜಿಸಲಾಗಿದೆ. ನಮ್ಮ ಆಹಾರ ಮಾತ್ರವಲ್ಲ ಬದುಕು ಕೂಡ ಸಾವಯವ ಆಗಬೇಕೆಂಬುದು ಈ ವಿಶೇಷ ತರಬೇತಿಯ ಆಶಯವಾಗಿದ್ದು ಯಾವುದೇ ವಯೋಮಾನದ ಪುರುಷರು, ಮಹಿಳೆಯರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಉದ್ಯೋಗಿಗಳು, ಕೃಷಿಕರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದು.
ಶಿಬಿರದಲ್ಲಿ ಪಾಲ್ಗೊಳ್ಳುವವರು ಫೆಬ್ರವರಿ 28ರ ಮುಂಚಿತವಾಗಿ ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕ -ಕೆ.ರತ್ನಾಕರ -94 4 8 8 3 5 6 0 6 , -ಹರಿಕೃಷ್ಣ ಕಾಮತ್- 9 4 8 1 3 9 0 7 1 0, -ಶರತ್ 9 3 4 3 5 6 9 6 9 4 ಎಂಬವರನ್ನು ಸಂಪರ್ಕಿಸಲು ಕೋರಲಾಗಿದೆ.
ಕೊಂಡೆವೂರಲ್ಲಿ ಕೃಷಿ ಬದುಕಿನ ಪಾಠ ಶಿಬಿರ: ಆಸಕ್ತರಿಂದ ಅಪೇಕ್ಷೆ
0
ಫೆಬ್ರವರಿ 19, 2023
Tags