ಅಮೃತಸರ: ಗಡಿಯಾಚೆಯಿಂದ ಹಾರಿ ಬಂದ ಡ್ರೋನ್ ಅನ್ನು ಅಮೃತಸರ ವಲಯದ ಶಹಜಾದಾ ಗ್ರಾಮದ ಬಳಿ ಬಿಎಸ್‌ಎಫ್ ಯೋಧರು ಹೊಡೆದುರಳಿಸಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಗಡಿ ಬಳಿ ನಿಯೋಜನೆಗೊಂಡಿದ್ದ ಬಿಎಸ್‌ಎಫ್ ಯೋಧರು ಡ್ರೋನ್ ಅನ್ನು ಗಮನಿಸಿದ್ದು, ಬಳಿಕ ಗುಂಡು ಹಾರಿಸಿ ಕೆಳಗುರುಳಿಸಿದ್ದಾರೆ ಎಂದೂ ಹೇಳಿದ್ದಾರೆ.